ಪ್ರಮುಖ ಸುದ್ದಿಮೈಸೂರು

ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿ

ಮೈಸೂರು,ಫೆ.16 : ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿಯನ್ನು ಫೆ.19ರಂದು ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ಎನ್.ಗೋಪಾಲ್ ರಾವ್ ಜಾಧವ್ ತಿಳಿಸಿದರು.

ಅಂದು ಬೆಳಗ್ಗೆ 9.30 ರಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಪೂರ್ಣ ಕುಂಭ ಹೊತ್ತ ಸುಮಂಗಲಿಯರು  ಹಾಗೂ ಜಾನಪದ ಕಲಾತಂಡಗಳೊಂದಿಗೆ ಶಿವಾಜಿ ಮಹಾರಾಜರ ಬೃಹತ್ ಮೆರವಣಿಗೆ ನಡೆಯಲಿದೆ, ನಂತರ ಕಲಾಮಂದಿರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ಮರಾಠ ಕ್ಷತ್ರೀಯ ಟ್ರಸ್ಟ್ ಕಾರ್ಯಾಧ್ಯಕ್ಷ ಕೆ.ಶ್ರೀನಿವಾಸರಾವ್ ಸಿಂಧೆ, ರಾಜ್ಯ ಕ್ಷತ್ರಿಯ ಮರಾಠ ಮಹಾ ಒಕ್ಕುಟದ ಜಿಲ್ಲಾದ್ಯಕ್ಷ ಚಂದ್ರರಾವ್ ಕವಾಳೆ, ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆ.ಕೆ.ಎಂ.ಸಿ ಅಧ್ಯಕ್ಷ ಕೇಶವನಾಥ್ ರಾವ್ ಜಾದವ್, ಕಾರ್ಯದರ್ಶಿ ಜ್ಞಾನ ಪ್ರಕಾಶ್ ರಾವ್ ಪವಾರ್, ಜಿಲ್ಲಾಧ್ಯಕ್ಷ ಮಹದೇವ್ ರಾವ್ ರಣ್ಡೋರೆ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: