ಮೈಸೂರು

11 ನೇ ಕುಂಭಮೇಳ ಉದ್ಘಾಟನೆಗೆ ಇನ್ನು ಕೆಲವೇ ಗಂಟೆಗಳು ಬಾಕಿ

ಮೈಸೂರು,ಫೆ.16:- ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 11 ನೇ ಕುಂಭಮೇಳ ಉದ್ಘಾಟನೆಗೆ ಇನ್ನು ಕೆಲವೇ ಗಂಟೆಗಳು ಬಾಕಿಯಿದ್ದು, ಕೊನೆಯ ಹಂತದ ಸಿದ್ಧತೆಗಳು ನಡೆದಿವೆ.

ನಾಳೆ ವಿವಿಧ ಕ್ಷೇತ್ರದ ಮಠಾಧೀಶರು ಮತ್ತು ರಾಜಕಾರಣಿಗಳು ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ.ಪುಣ್ಯಸ್ನಾನ ಮಾಡುವ ಲಕ್ಷಾಂತರ ಭಕ್ತರಿಗೆ ಸ್ನಾನಘಟ್ಟ, ಶೌಚಾಲಯ, ಪಾರ್ಕಿಂಗ್, ಲೈಟಿಂಗ್ಸ್, ಸೇರಿದಂತೆ ಹಲವು ಸಿದ್ಧತೆಗಳು ಸಂಪೂರ್ಣ ಮುಕ್ತಾಯಗೊಂಡಿದೆ. ಧಾರ್ಮಿಕ ಮಂಟಪ,ಯಾಗ ಮಂಟಪ,ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳು ಆಕರ್ಷಕವಾಗಿ ಸಿದ್ದಗೊಳ್ಳುತ್ತಿದೆ. ಬಿಜಿಎಸ್ ಮತ್ತು ಜೆಎಸ್ಎಸ್ ಸಂಸ್ಥಾನ ಮಠಗಳಿಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರು ಕುಂಭಮೇಳದಲ್ಲಿ ಭಾಗಿಯಾಗುವ ನಿರೀಕ್ಷೆಯಿಂದ ಟಿ.ನರಸೀಪುರದ ಸುತ್ತಮುತ್ತ ರಸ್ತೆಗಳ ಸಂಚಾರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಚಿಕಿತ್ಸಾಲಯ,ತುರ್ತು ಘಟಕ, ಪೊಲೀಸ್ ಕಂಟ್ರೋಲ್ ರೂಮ್,ಮಾಹಿತಿ ಕೇಂದ್ರಗಳ ನಿರ್ಮಾಣ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: