ಮೈಸೂರು

ಸಿಎಫ್ ಟಿ.ಆರ್.ಐ ನಿರ್ದೇಶಕ ರಾಘವರಾವ್ ವಜಾಕ್ಕೆ ಆಗ್ರಹ

ಮೈಸೂರು,ಫೆ.16 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದ ಸಿಎಫ್ ಟಿ.ಆರ್.ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆಯು ಆಗ್ರಹಿಸಿದೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಕರೆದಾಗ ಪ್ರೊಟೋಕಾಲ್ ಪ್ರಕಾರ ಪುಷ್ಪಾರ್ಚನೆ ಇಲ್ಲವೆಂದು ನಿರಾಕರಿಸಿದ್ದರು, ವಿಷಯವಾಗಿ ವಕೀಲ ಪಿ.ಚಂದ್ರಶೇಖರ್ ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಲಿತ ನೌಕರರು ಮತ್ತು ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈ ಬಗ್ಗೆ ಪ್ರತಿಭಟಿಸದೇ ಇರುವುದು ಹೇಡಿತನ ಎಂದು ವೇದಿಕೆ ರಾಜ್ಯಾಧ್ಯಕ್ಷ ಎಸ್.ದಿವಾಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: