ಮೈಸೂರು

ಕುಂಭಮೇಳದ ಅಂತಿಮ ಸಿದ್ಧತೆಗಳನ್ನು ವೀಕ್ಷಿಸಿದ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಫೆ.17:-  ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ನಡೆಯುವ 11 ಕುಂಭಮೇಳದ ಅಂತಿಮ ಸಿದ್ದತೆಗಳನ್ನು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ ಅವರು ಪರಿಶೀಲನೆ ನಡೆಸಿದರು.

ಫೆಬ್ರವರಿ 19 ರಂದು ಬೆಳಿಗ್ಗೆ 9.15 ಮತ್ತು 11.45 ಕ್ಕೆ ಪುಣ್ಯಸ್ನಾನದ ಸಮಯವನ್ನು ನಿಗದಿ ಪಡಿಸಿದ್ದು ಮುಖ್ಯಮಂತ್ರಿಯವರು ಆ ಸಮಯದಲ್ಲಿ ಪಾಲ್ಗೊಳ್ಳುವರು, ಉಪ ಮುಖ್ಯಮಂತ್ರಿಯವರು ಭಾಗವಹಿಸಲಿದ್ದು ಸಚಿವ ಸಂಪುಟದ ಹಲವು ಸಚಿವರು ಭಾಗ ವಹಿಸುತ್ತಾರೆ ಎಂದರು. ಜಿಲ್ಲಾಡಳಿತಕ್ಕೆ ತೇಲುವ ಸೇತುವೆಯನ್ನು ಸೇನೆಯ ಮೇಜರ್ ವೀರಣ್ಣ ಹಸ್ತಾಂತರಿಸಿದರು. ಸೇತುವೆಯ  ಮೇಲೆ ಸಚಿವರು ಸಂಚರಿಸಿ ಸೇನೆಯ ಯೋಧರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾಮಿಜಿಗಳಿಗೆ ವಾಸ್ತವ್ಯ ಕಲ್ಪಿಸಲು ನಾಲ್ಕು ಕುಟೀರ ಸ್ಸ್ಥಾಪಿಸಲಾಗಿದೆ. ಭಕ್ತಾಧಿಗಳಿಗೆ  ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಕುಂಭಮೇಳಕ್ಕೆ 5 ರಿಂದ 10 ಲಕ್ಷ  ಭಕ್ತಾಧಿಗಳು ಭಾಗವಹಿಸುವ ನೀರೀಕ್ಷೆ ಇದೆ. ಧಾರ್ಮಿಕ ಆಚರಣೆಯಲ್ಲಿ ಭಕ್ತರು ಬಂದು ನದಿಯಲ್ಲಿ ಮಿಂದು ಪುಳಕಿತರಾಗುವಂತೆ ಭಕ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: