ಮೈಸೂರು

ಕುಂಭಮೇಳ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಮೈಸೂರು, ಫೆ.17:-  ಅಗಸ್ತ್ಯೇಶ್ವರಸ್ವಾಮಿಗೆ ದೇವಾ ಅನುಜ್ಞಾ ಪೂಜೆಯನ್ನು ನೆರವೇರಿಸುವ ಮೂಲಕ ಕುಂಭಮೇಳಕ್ಕೆ ಇಂದು ವಿದ್ಯುಕ್ತ ಚಾಲನೆ ನೀಡಲಾಯಿತು.
ಬೆಂಗಳೂರು ಕೈಲಾಸಾಶ್ರಮದ ಜಗದ್ಗುರು ಜಯೇಂದ್ರ ಪುರಿ ಮಹಾಸ್ವಾಮಿ, ಮೈಸೂರು ಆದಿ ಚುಂಚನಗಿರಿ ಶಾಖಾ ಮಠದ ಸೋಮನಾಥೇಶ್ವರಸ್ವಾಮಿ ಹಾಗೂ ಟಿ.ನರಸೀಪುರ ಕನಕಗುರು ಪೀಠದ ಶೀ  ದೊರೆ ಸ್ವಾಮೀಜಿಗಳು ಅಗಸ್ತ್ಯೇಶ್ವರ ಸ್ವಾಮಿಗೆ ಅನುಜ್ಞೆ ಪೂಜೆ ನೆರವೇರಿಸಿದರು.
ಗಣಪತಿ, ರುದ್ರ  ಮತ್ತು ಚಂಡಿ ಹೋಮ ನಡೆಸಿ ನಾಡಿನ ಸುಭಿಕ್ಷೆಗೆ ಮಹಾ ಸಂಕಲ್ಪ ಹೋಮವನ್ನು ನದಿಯ ಮಧ್ಯ ಭಾಗದಲ್ಲಿ  ನಿರ್ಮಿಸಿರುವ ಯಾಗ ಮಂಟಪದಲ್ಲಿ  ನಡೆಯಲಿದೆ. ಇಂದು ಮದ್ಯಾಹ್ನ ವರಗೆ ಗಣಪತಿ ಹೋಮ , ಮಧ್ಯಾಹ್ನ ರುದ್ರ ಹೋಮ ಹಾಗೂ ನಾಳೆ ಚಂಡಿ ಹೋಮ ಮತ್ತು ಮಹಾಪುರುಷರ ಪುರ ಪ್ರವೇಶ ನಡೆಯಲಿದೆ.  ನಾಡಿನ ಸಮಸ್ತ ಜನೆತೆಯು ಸುಭೀಕ್ಷೆಯಿಂದ ಇರಲು ಪುಣ್ಯಕಾಲದಲಿ ಹೋಮ ಹವನಗಳನ್ನು ಮಾಡಲಾಗುತ್ತದೆ. ಎಂದು  ಕೈಲಾಸಾಶ್ರಮದ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿ ಪುರಿ ಮಹಾಸ್ವಾಮಿ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: