ಮೈಸೂರು

ಕುಂಭಮೇಳದಲ್ಲಿ ವಿಜೃಂಭಣೆಯ ಮೆರವಣಿಗೆ

ಮೈಸೂರು, ಫೆ.17:-  ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುಂಭಮೇಳ ಮಹೋತ್ಸವ ಸಮಿತಿ ವತಿಯಿಂದ ಫೆಬ್ರವರಿ 18 ರಂದು ಸಂಜೆ 4 ಗಂಟೆಗೆ ಟಿ ನರಸೀಪುರ ತಿರುಮಕೂಡಲು ಶ್ರೀಕ್ಷೇತ್ರದಿಂದ ಟಿ.ನರಸೀಪುರ ಪಟ್ಟಣದಲ್ಲಿ ವಿಜೃಂಭಣೆಯ ಮೆರವಣಿಗೆ ಆಯೋಜಿಸಲಾಗಿದೆ.
ಮೆರವಣಿಗೆಯಲ್ಲಿ ದೂರದರ್ಶನ ಕಲಾವಿದ ಪುಟ್ಟಸ್ವಾಮಿ. ಹಾಗೂ ಹೆಚ್.ಎಮ್ ಮಹಾದೇವ ಇವರ ನಾದ ಸ್ವರ, ಸಣ್ಣಸ್ವಾಮಿ ಎಸ್.ಡಿ., ಪ್ರಭು ಎಸ್, ಸುಮಂತ್ ಎಮ್ ಸಿ. ಡೊಳ್ಳುಕುಣಿತ, ಸೊಮೇಶ್ ಎಮ್., ಹರೀಶ್ ಹಾಗೂ ದೇವರಾಜು ನಗಾರಿ ಮಳವಳ್ಳಿಯ ಟಿ ಕೆ ರಾಜಶೇಖರ್, ಮೈಸೂರು ಹೊನ್ನೆಗೌಡ ಇವರಿಂದ ಗಾರುಡಿಗೊಂಬೆ, ಕರಿಯಪ್ಪ, ಬಿ ಎಸ್ ಸಿದ್ದಯ್ಯ ಶಂಕರ ಅವರು ತಮಟೆ, ಆನಂದ ಕುಮಾರ್ ಟಿ.ಎನ್., ಎಡಹಳ್ಳಿ ಓಂ ಪ್ರತಾಪ್ ಹಾಗೂ ಪ್ರಭುಸ್ವಾಮಿ ಇವರಿಂದ ವೀರಭದ್ರ ಕುಣಿತ, ತಲಕಾಡು ಕೃಷ್ಣ ಮೂರ್ತಿ ಟಿ.ಎಂ., ಕೆಂಪಿಸಿದ್ದಯ್ಯನ ಹುಂಡಿ ಮಹದೇವ್ ಹಾಗೂ ಹೊಸಹುಂಡಿ ಪುಟ್ಟರಾಜು ಇವರಿಂದ ಕಂಸಾಳೆ  ತಂಡ ಭಾಗವಹಿಸಲಿವೆ.
ಪೂಜಾ ಕುಣಿತ ತಂಡದಲ್ಲಿ ವೈ.ಬಿ ಪ್ರಕಾಶ್, ಹಳ್ಳಿ ಶಿವು, ದೊಣ್ಣೆ ವರಸೆ ತಂಡದಲ್ಲಿ ಅಜಯ್ ನಾಯಕ ಅವರ ತಂಡ, ಕೊಂಬುಕಹಳೆ ತಂಡದಲ್ಲಿ ಮೊಹನ್ ಕುಮಾರ್ ಮತ್ತು ಸಂಗಡಿಗರು, ಸುಗ್ಗಿ ಕುಣಿತ ತಂಡದಲ್ಲಿ ಗೌರಿಶಂಕರ್ ಹಾಗೂ ಸಂಗಡಿಗರು ಭಾಗವಹಿಸುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ  ನಿರ್ದೇಶಕ ಹೆಚ್. ಚನ್ನಪ್ಪ ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: