ಮೈಸೂರು

ಮೈಸೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಶಿಲ್ಪಾ ನಾಗ್ ಅಧಿಕಾರ ಸ್ವೀಕಾರ : ಅಪರ ಜಿಲ್ಲಾಧಿಕಾರಿಯಾಗಿ ಅನುರಾಧ

ಮೈಸೂರು,ಫೆ.17:- ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ  ಕೆ.ಹೆಚ್ ಜಗದೀಶ್  ಅವರನ್ನು ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಯಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ನೇಮಕವಾಗಿದ್ದು, ಜಗದೀಶ್ ಅವರಿಂದ ಇಂದು ಅಧಿಕಾರ ಸ್ವೀಕರಿಸಿದರು. ಹೂಗುಚ್ಛ ನೀಡಿ ಮಾಡಿದ ಜಗದೀಶ್ ಅವರು ಅಧಿಕಾರ ಹಸ್ತಾಂತರಿಸಿದರು.

ನೂತನ ಆಯುಕ್ತೆ ಶಿಲ್ಪಾನಾಗ್ ಈ ಹಿಂದೆ ಮೈಸೂರಿನ ಅಬ್ದುಲ್ ನಜೀರ್  ಸಾಬ್ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ರೂರಲ್  ಡೆವಲಪ್ಮೆಂಟ್  ಅಂಡ್ ಪಂಚಾಯತ್ ರಾಜ್ ನ ನಿರ್ದೇಶಕರಾಗಿದ್ದರು.

ಇದರೊಂದಿಗೆ ಮೈಸೂರು ಜಿಲ್ಲಾ ಅಪರ ಜಿಲ್ಲಾಧಿಕಾರಿ ಬಿ ಆರ್ ಪೂರ್ಣಿಮಾ ಅವರ ಸ್ಥಳಕ್ಕೆ ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ  ಅನುರಾಧ  ಅವರನ್ನು ನೇಮಕ ಮಾಡಲಾಗಿದೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದ ಸವಿತಾ ಎಂ.ಕೆ ಅವರನ್ನು ಮಂಗಳೂರಿನ   ಬೈಕಂಪಾಡಿಗೆ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: