ಮೈಸೂರು

ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ; ಜ.22 ರಂದು

ದಿ ಭಾವಸಾರ ಕ್ಷತ್ರಿಯ ಕೋ-ಅಪರೇಟಿವ್ ಸೊಸೈಟಿಯ ಶತಮಾನೋತ್ಸವವು ಜ.22ರ ಭಾನುವಾರದಂದು ನಡೆಯಲಿದೆ ಎಂದು ಅಧ್ಯಕ್ಷ ಆರ್.ವಿ. ಶಿವಾಜಿರಾವ್ ರಂಪೊರೆ ತಿಳಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರಿನ ಪ್ರಥಮ ಸಹಕಾರ ಸಂಘವಾಗಿದೆ. ಕಾರ್ಯಕ್ರಮವನ್ನುವಿಠ್ಠಲ್ ರುಕ್ಮಿಣಿ ಕನ್ವೆನ್ಶನ್ ಹಾಲ್‍ನಲ್ಲಿ ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಶಾಸಕ ವಾಸು ಶಿಲಾಫಲಕ ಅನಾವರಣಗೊಳಿಸುವರು. ಮಹಾಪೌರ ರವಿಕುಮಾರ್, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಶಾಸಕ ಎಂ.ಕೆ.ಸೋಮಶೇಖರ್, ಸಹಕಾರ ಸಂಘಗಳ ಜಂಟಿ ನಿಬಂಧಕ ಜೋಷಿ ಉಪಸ್ಥಿತರಿರುವರು.

ಸಮಾರೋಪ ಸಮಾರಂಭ : ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಭಾಗಿಯಾಗುವರು. ಶಾಸಕ ಜಿ.ಟಿ.ದೇವೇಗೌಡ ಅವರು ಸ್ಮರಣಿಕೆಯ ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಿದರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷ ಆರ್.ವಿ.ಶಿವಾಜಿರಾವ್ ರಂಪೂರೆ ವಹಿಸುವರು. ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಜಯರಾಮ್‍ರಾವ್ ಲಾಳಿಗೆ, ಮುಖಂಡರಾದ ರಮೇಶ್ ತಾಪ್ಸೆ ಶ್ರೀನಿವಾಸರಾವ್ ಸುತ್ರಾವೆ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಕಳೆದೊಂದು ಶತಮಾನದಿಂದಲೂ ತನ್ನ ಸಮುದಾಯದವರ ಸ್ವಾವಲಂಬನೆ ಬದುಕಿಗಾಗಿ ಸಂಘದಿಂದ ಸುಲಭ ಕಂತಿನ ಸಾಲ, ಮಕ್ಕಳಿಗೆ ಶೈಕ್ಷಣಿಕ ಸಾಲ ನೀಡಲಾಗುತ್ತಿದ್ದು 4 ಸಾವಿರ ಗ್ರಾಹಕರನ್ನು ಹೊಂದಿದೆ. ಎರಡು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಪ್ರಸಕ್ತ ಸಾಲಿನಲ್ಲಿ 20 ಲಕ್ಷ ರೂಪಾಯಿ ಲಾಭ ಪಡೆದಿದೆ ಎಂದರು.

ಉಪಾಧ್ಯಕ್ಷ ಜೈಕುಮಾರ್ ಲಾಳಿಗೆ, ನಿರ್ದೇಶಕರಾದ ಚೈತನ್ಯ ಕುಮಾರ ಹಿರಾಸ್ಕರ್, ಎಲ್.ವಿ.ದಯಾಶಂಕರ್ ಲಾಲೆ, ಜಯಪಾಲ್ ನಾಯಕ್, ಎನ್.ಜಿ. ಬಾಲಾಜಿರಾವ್ ನಾಯಕ್ ಹಾಗೂ ರಾಕೇಶ್ ನಾಯಕ್, ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

Leave a Reply

comments

Related Articles

error: