ಮೈಸೂರು

ತಿರುಮಕೂಡಲು ತ್ರಿವೇಣಿ ಸಂಗಮ ಕ್ಷೇತ್ರ ಧಾರ್ಮಿಕವಾಗಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ : ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಫೆ.18:-  ದಕ್ಷಿಣ ಪ್ರಯಾಗ, ಕಾಶಿಗಿಂತಲೂ ಗುಲಗಂಜಿಯಷ್ಟು ಪಾವಿತ್ರ್ಯತೆ ಇರುವುದರಿಂದ ದಕ್ಷಿಣ ಭಾರತದ ಕುಂಭಮೇಳ ನಡೆಯುವ ತಿರುಮಕೂಡಲು ತ್ರಿವೇಣಿ ಸಂಗಮ ಕ್ಷೇತ್ರ ಧಾರ್ಮಿಕವಾಗಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ತಿ.ನರಸೀಪುರ ಪಟ್ಟಣದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ನಿನ್ನೆಯಿಂದ ಆರಂಭಗೊಂಡ ದಕ್ಷಿಣ ಭಾರತದ 11ನೇ ಕುಂಭಮೇಳ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ, ಮೂರು ವೇದಿಕೆಗಳಲ್ಲಿ ನಡೆಯುವ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡೋಲು ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗಂಗೆಯಷ್ಟೇ ಪರಮ ಪವಿತ್ರವಾದ ಕಾವೇರಿ ನದಿ ಕಪಿಲೆ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ನದಿಗಳ ಸಂಗಮಗೊಳ್ಳುವ ಇಲ್ಲಿನ ತ್ರಿವೇಣಿ ಸಂಗಮ ಉತ್ತರ ಭಾರತದ ಅಲಹಬಾದ್ ನ ಪ್ರಯಾಗಕ್ಕಿಂತಲೂ ಶ್ರೇಷ್ಠತೆಯನ್ನು ಹೊಂದಿದೆ ಎಂದರು.

ಭೈರವೈಕ್ಯ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕೈಲಾಸಾಶ್ರಮದ ತಿರುಚ್ಚಿ ಸ್ವಾಮೀಜಿ ಸೇರಿದಂತೆ ಹರಗೂರು ಚರಮೂರ್ತಿಗಳು ದಕ್ಷಿಣ ಭಾರತದ ಜನರಿಗೆ ಕುಂಭಮೇಳದಂತಹ ಧಾರ್ಮಿಕ ಉತ್ಸವ ನೋಡುವ ಭಾಗ್ಯವನ್ನು  ಕಲ್ಪಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶೇಷ ಕಾಳಜಿಯನ್ನು ವಹಿಸಿ ಉತ್ಸವಕ್ಕೆ ಹೆಚ್ಚಿನ ಅನುದಾನವನ್ನು ಕೊಟ್ಟಿದ್ದಾರೆ. ಶಾಸಕರಾದ ಡಾ.ಎಸ್.ಯತೀಂದ್ರ ಹಾಗೂ ಎಂ.ಅಶ್ವಿನ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಡಾಳಿತ ಮತ್ತು ತಾಲೂಕು  ಆಡಳಿತ ಉತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಸಿಕ್ಕಂತಹ ಅಲ್ಪ ಅವಧಿಯಲ್ಲೇ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ತ್ರಿವೇಣಿ ಸಂಗಮದಲ್ಲಿ ಹಿಂದಿನ ಹತ್ತು ಕುಂಭಮೇಳವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಂದಿನ ಶಾಸಕ, ಸಚಿವರೂ ಆಗಿದ್ದ ಡಾ.ಹೆಚ್.ಸಿ.ಮಹದೇವಪ್ಪ ಅವರು ಯೋಜನೆ ರೂಪಿಸಿ ಕಾರಣಕರ್ತರಾಗಿದ್ದರು. ಅವರನ್ನೂ ಕೂಡ ಆಹ್ವಾನಿಸಲಾಗಿತ್ತಾದರೂ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಹಕಾರವನ್ನು ನೀಡಿದ್ದಾರೆ ಎಂದು ತಿಳಿಸಿದರು.

ಸಂಸದ ಆರ್.ಧ್ರುವನಾರಾಯಣ  ಮಾತನಾಡಿ, ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳನ್ನೇ ಹೆಚ್ಚು ಇರುವಂತಹ ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಲು ಪುಣ್ಯ ಮಾಡಿದ್ದೇನೆ. ತ್ರಿವೇಣಿ ಸಂಗಮ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿಗೊಳ್ಳಲಿ. ಮೂರು ದಿನಗಳ ಕಾಲ ನಡೆಯುವ ಕುಂಭಮೇಳ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಭಾರತ ಸರ್ಕಾರದ ವಾರ್ತಾ ಇಲಾಖೆಯ ಉಪ ನಿರ್ದೇಶಕಿ ಟಿ.ಸಿ.ಪೂರ್ಣಿಮಾ ತ್ರಿವೇಣಿ ಸಂಗಮ ಹಾಗೂ ಕುಂಭಮೇಳ ಮಹತ್ವ ಕುರಿತು ಭಾಷಣ ಮಾಡಿದರು. ಮೈಸೂರು ನಗರದ ವಿಶ್ವಮಾನವ ಮಕ್ಕಳ ತಂಡ ವೇದಘೋಷ ನೇರವೇರಿಸಿ,  ನೃತ್ಯವನ್ನು ಪ್ರದರ್ಶಿಸಿದರು. ಆದಿಚುಂಚನಗಿರಿ ಶಾಖಾಮಠದ ಸೋಮನಾಥೇಶ್ವರ ಸ್ವಾಮೀಜಿ ಹಾಗೂ ಕಾಗಿನೆಲೆ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಕೆ.ಆರ್.ನಗರದ ಶಿವಾನಂದ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ದೊರೆಸ್ವಾಮಿಗಳು, ಶಾಸಕರಾದ ಡಾ.ಎಸ್.ಯತೀಂದ್ರ, ಎಂ.ಅಶ್ವಿನ್ ಕುಮಾರ್,

Leave a Reply

comments

Related Articles

error: