ಪ್ರಮುಖ ಸುದ್ದಿಮೈಸೂರು

ಫೆ. 23ರಂದು ವರುಣಾ ಕ್ಷೇತ್ರದಲ್ಲಿ ಬೃಹತ್ ಉದ್ಯೋಗ ಮೇಳ : ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಫೆ.18 : ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಪೆಬ್ರವರಿ 23 ರಂದು ವರುಣಾ ಕ್ಷೇತ್ರದಲ್ಲಿ ಬೃಹತ್ ಉದ್ಯೋಗ ಮೇಳಾವನ್ನು ಆಯೋಜಿಸಲಾಗಿದೆ ಎಂದು ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ರವರು ತಿಳಿಸಿದರು..

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಂಜನಗೂಡು ತಾಲ್ಲೂಕು ತಾಂಡವಪುರ ಗ್ರಾಮದ ಅಗ್ನಿ ನೇತ್ರಾಂಭಿಕ ದೇವಸ್ಥಾನದ ಆವರಣದಲ್ಲಿ ವರುಣ ವಿಧಾನಸಭಾ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಈ ಬೃಹತ್ ಉದ್ಯೋಗ ಮೇಳಾವನ್ನು ಆಯೋಜಿಸಲಾಗಿದೆ ,

ಈ ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ಈಗಲ್, ಏಮ್ಸ್, ಕೋಟಕ್, ಟಿವಿಎಸ್, ಫ್ರೆಶ್ ವರ್ಲ್ಡ್, ಮುತ್ತುಟ್ ಫೈನಾನ್ಸ್, ಜಸ್ಟ್ ಡಯಲ್, ಹೆಚ್.ಜಿ.ಎಸ್., ಯುರೇಕಾ ಸೇರಿದಂತೆ 100 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು ಸುಮಾರು ಐದು ಸಾವಿರಕ್ಕೂ ಹೆಚ್ಚು ಉದ್ಯೋಗದ ಅವಕಾಶವಿರುತ್ತದೆ , ೮ ನೇ ತರಗತಿಯಿಂದ ಹಿಡಿದು ವಿವಿದ ವಿದ್ಯಾರ್ಹತೆ ಯುಳ್ಳ ಎಸ್ ಎಸ್ ಎಲ್ ಸಿ , ಪಿಯುಸಿ , ಐಟಿಐ , ಡಿಪ್ಲೋಮಾ , ಬಿ ಇ , ನರ್ಸಿಂಗ್,  ವಾಹನ ಚಾಲಕರು , ಅಂಗವಿಕಲ ಅಭ್ಯರ್ಥಿಗಳು ಎಲ್ಲರೂ ಸಹ ಭಾಗವಹಿಸಬಹುದು , ಉಚಿತ ಪ್ರವೇಶವಿದ್ದು ಬೆಳಗ್ಗೆ 9 ರಿಂದ ಸ್ಥಳದಲ್ಲಿಯೇ ನೊಂದಣಿ ಮಾಡಲಾಗುತ್ತದೆ , ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ವಿತರಿಸಲಾಗುವುದು ,

ವಿದ್ಯಾವಂತ ನಿರುದ್ಯೋಗಿ ಯುವಕ , ಯುವತಿಯರು , ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು. ವಿವರಗಳಿಗೆ ಮೊ.ಸಂ. 8722332266, 9880178959, 9880626344 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿ ಯಲ್ಲಿ ಅಕ್ಷರ ಫೌಂಡೇಷನ್ ನ ಕುಮಾರ್ ಉಪ್ಪಾರ್, ಕಾಂಗ್ರೆಸ್ ನ ಬಸವರಾಜ್ , ಬಿ ಎಂ ರಾಮು , ರಂಗಸ್ವಾಮಿ , ವರುಣ ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: