ಮೈಸೂರು

ರೈತರ ಸಾಲ ಮನ್ನಾ : ಕೃಷಿ ಪತ್ತಿನ ಸಂಘಕ್ಕೆ ಮಾಪನ ನೀಡಲು ಇನ್ನೆರಡು ದಿನ ಅವಕಾಶ

ಮೈಸೂರು, ಫೆ.18:- ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು ಅಲ್ಪಾವಧಿ ಬೆಳೆ ಸಾಲ (ಕೆಸಿಸಿ) ಪಡೆದ ಎಲ್ಲಾ ರೈತ ಸದಸ್ಯರುಗಳನ್ನು ಕರ್ನಾಟಕದ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ-2018 ರ ಫಲಾನುಭವಿಗಳನ್ನು ಗುರುತಿಸಿ ಗಣಕಯಂತ್ರದ ತಂತ್ರಾಂಶದಲ್ಲಿ ಅಳವಡಿಸಬೇಕಾಗಿದೆ.
ಗಣಕಯಂತ್ರದಲ್ಲಿ ಭೂಮಿ ಸರ್ವೆ ನಂಬರ್, ಆಧಾರ್ ಕಾರ್ಡ್, ಮತ್ತು ಆಹಾರ ಪಡಿತರ ಚೀಟಿ (ರೇಷನ್ ಕಾರ್ಡ್)ಗಳಲ್ಲಿರುವ ಮಾಹಿತಿಯನ್ನು ಹೊಂದಾಣಿಕೆ ಮಾಡಬೇಕಾಗಿದೆ. ಆದ ಕಾರಣ ರೈತರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದಿದ್ದಲ್ಲಿ ಸಾಲ ಮನ್ನಾ ಯೋಜನೆಯ ಪ್ರಯೋಜನ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಪಡೆದಿರುವ ಸಾಲಕ್ಕೆ ಅನ್ವಯವಾಗುವುದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು ಸಾಲ ಪಡೆದಿರುವ ಎಲ್ಲಾ ರೈತ ಸದಸ್ಯ ಫಲಾನುಭವಿಗಳು 2 ದಿನದೊಳಗಾಗಿ ನಿಮ್ಮ ನಿಮ್ಮ ಭೂಮಿ ಸರ್ವೆ ನಂಬರ್,  ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‍ಗಳನ್ನು ನಿಮ್ಮ ವ್ಯಾಪ್ತಿಗೆ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ತಲುಪಿಸತಕ್ಕದ್ದು. ತಪ್ಪಿದ್ದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಬೆಳೆ ಸಾಲಮನ್ನಾ ಯೋಜನೆ-2018 ಪ್ರಯೋಜನವನ್ನು ತಾವು ಪಡೆಯುವಲ್ಲಿ ವಿಫಲರಾಗುತ್ತೀರಿ ಎಂದು ಎಂ.ಸಿ.ಡಿ.ಸಿ.ಸಿ. ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿ.ಬಿ. ಲಿಂಗಣ್ಣಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: