ಕರ್ನಾಟಕಪ್ರಮುಖ ಸುದ್ದಿ

ಸರಿಗಮಪ ಗ್ರಾಂಡ್ ಫಿನಾಲೆಗೆ 6 ಸ್ಪರ್ಧಿಗಳು ಎಂಟ್ರಿ

ಬೆಂಗಳೂರು (ಫೆ.18): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ರಿಯಾಲಿಟಿ ಶೋ ಸರಿಗಮಪ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಆರು ಮಂದಿ ಸ್ಪರ್ಧಿಗಳು ಫಿನಾಲೆಗೆ ಬಂದಿದ್ದಾರೆ. ಈ ಬಾರಿಯ ಸರಿಗಮಪ ಸೀಸನ್ 15 ವಿಶೇಷವಾಗಿತ್ತು. ಎಲ್ಲಾ ಸ್ಪರ್ಧಿಗಳು ಅದ್ಭುತ ಫರ್ಪಾಮೆನ್ಸ್ ನೀಡಿದ್ದಾರೆ. ಆರೋಗ್ಯಕರವಾದ ಸ್ಪರ್ಧೆ ಏರ್ಪಟ್ಟಿತ್ತು. ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಯಾರಾಗ್ತಾರೆ ಸರಿಗಮಪ ವಿಜೇತರು ಎಂಬುದು ಬಾರೀ ಕುತೂಹಲ ಮೂಡಿಸಿದೆ.

ಸೆಮಿ ಫಿನಾಲೆಯಲ್ಲಿ ವಿಜೇತ್, ಹನುಮಂತಣ್ಣ ಹಾಗೂ ಕೀರ್ತನ್ ಹೊಳ್ಳರನ್ನು ಹಂಸಲೇಖ ನೇರವಾಗಿ ಗ್ರಾಂಡ್ ಫಿನಾಲೆಗೆ ಆಯ್ಕೆ ಮಾಡಿದರು. ವಿಜೇತ್ ಹಂಸಲೇಖ ರಚನೆಯ ‘ತನುವಿನ ಮನೆಗೆ ಬಾ ಅತಿಥಿ…. ‘ ಹಾಡನ್ನು ಅದ್ಭುತವಾಗಿ ಹಾಡಿದರು.  ವಿಜೇತ್ ಹಾಡಿನಿಂದ ಖುಷಿಯಾದ ಹಂಸಲೇಖ ನೇರವಾಗಿ ಗ್ರಾಂಡ್ ಫಿನಾಲೆಗೆ ಆಯ್ಕೆ ಮಾಡಿದರು. ಅದೇ ರೀತಿ ಹನುಮಂತಣ್ಣ ‘ ಬೇಡುವೆನು ವರವನ್ನು.. ಹಾಡಿಗೆ ತೀರ್ಪುಗಾರರು ಫುಲ್ ಖುಷಿಯಾಗಿ ಅವರನ್ನು ನೇರವಾಗಿ ಆಯ್ಕೆ ಮಾಡಿದರು. ಇನ್ನು ಕೀರ್ತನ್ ಹೊಳ್ಳ ಅರ್ಜುನ್ ಜನ್ಯ ರಚನೆಯ ‘ ಶಂಭೋ ಶಿವ ಶಂಭೋ ಗೀತೆಯನ್ನು ಹಾಡಿದರು. ಇವರನ್ನು ನೇರವಾಗಿ ಆಯ್ಕೆ ಮಾಡಲಾಯಿತು.

ಹನುಮಂತಣ್ಣ ತಂದೆ-ತಾಯಿ ಈ ವೇದಿಕೆಗೆ ಬಂದಿದ್ದು ವಿಶೇಷವಾಗಿತ್ತು. ಈ ಕ್ಷಣವನ್ನು ನೋಡಿ ಎಲ್ಲರೂ ಭಾವುಕಾದರು. ಕೊನೆಗೆ ತೀರ್ಪುಗಾರರ ಸೀಕ್ರೆಟ್ ಸ್ಕೋರ್, ಜ್ಯೂರಿಗಳ ಮಾರ್ಕ್ಸನ್ನು ಲೆಕ್ಕಹಾಕಿ 3 ಮಂದಿಯನ್ನು ಗ್ರಾಂಡ್ ಫಿನಾಲೆಗೆ ಆಯ್ಕೆ ಮಾಡಲಾಯಿತು. ಋತ್ವಿಕ್, ಸಾಧ್ವಿನಿ ಹಾಗೂ ನಿಹಾಲ್ ರನ್ನು ಆಯ್ಕೆ ಮಾಡಲಾಯಿತು.

ಗ್ರಾಂಡ್ ಫಿನಾಲೆಗೆ 5 ಮಂದಿಗೆ ಅವಕಾಶ ಎನ್ನಲಾಗಿತ್ತು. ಆದರೆ ಹಂಸಲೇಖ ಅವರು 6 ಮಂದಿಗೆ ಅವಕಾಶ ನೀಡಿದ್ದಾರೆ. ವಿಜೇತ್, ಕೀರ್ತನ್ ಹೊಳ್ಳ, ಹನುಮಂತಣ್ಣ, ಸಾಧ್ವಿನಿ, ಋತ್ವಿಕ್ ಹಾಗೂ ನಿಹಾಲ್ ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸ್ಟೇಜ್ ನಲ್ಲಿ ಉತ್ತಮ ಫೈಟ್ ಏರ್ಪಟಿದ್ದು ವಿಜೇತರು ಯಾರಾಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. (ಎನ್.ಬಿ)

Leave a Reply

comments

Related Articles

error: