
ಪ್ರಮುಖ ಸುದ್ದಿ
ಪುಲ್ವಾಮಾ ದಾಳಿ ಪ್ರಕರಣ : ಐದು ಕೋಟಿ ರೂ.ನೀಡಿದ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್
ದೇಶ(ನವದೆಹಲಿ)ಫೆ.18:- ಜಮ್ಮು-ಕಾಶ್ಮೀರದ ಫುಲ್ವಾಮಾದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಾಲಿವುಡ್ ನಟರು ಸಹಾಯ ಹಸ್ತ ನೀಡಿದ್ದಾರೆ. ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಮೃತ ಯೋಧರ ಕುಟುಂಬಕ್ಕೆ ನಿಧಿಯಡಿ ಐದು ಕೋಟಿ ರೂ.ನೀಡಿದ್ದಾರಂತೆ.
ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಬಾಲಿವುಡ್ ಆರ್ಥಿಕವಾಗಿ ಸಹಾಯಮಾಡಲು ಮುಂದಾಗಿದ್ದು, ಅಮಿತಾಬ್ ಬಚ್ಚನ್, ನಂತರ ಟೋಟಲ್ ಧಮಾಲ್ ಚಿತ್ರ ತಂಡ ಐವತ್ತು ಲಕ್ಷರೂ.ಗಳನ್ನು ನೀಡಿದೆ. ಅಕ್ಷಯ್ ಕುಮಾರ್ ದೊಡ್ಡ ಮೊತ್ತವಾದ ಐದು ಕೋಟಿ ರೂ.ನೀಡಿದ್ದಾರಂತೆ.
‘ಭಾರತ್ ಕೆ ವೀರ್’ ಅಡಿಯಲ್ಲಿ ನಿಧಿಗೆ ಹಣವನ್ನು ಅರ್ಪಿಸಿದ್ದು, ‘ದೇವರು ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರದಲ್ಲಿ ಗುಣಮುಖರಾಗಲಿ’ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. (ಎಸ್.ಎಚ್)