ಪ್ರಮುಖ ಸುದ್ದಿಮೈಸೂರು

ಸಿಎಫ್ ಟಿಆರ್.ಐ ನಿರ್ದೇಶಕರ ವಜಾಕ್ಕೆ ಮಾಜಿ ಮೇಯರ್ ಒತ್ತಾಯ

ಮೈಸೂರು,ಫೆ.18 : ಸಿಎಫ್ ಟಿ.ಆರ್ ಐ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್.ರಾಘವರಾವ್ ಅವರ ವರ್ತನೆಯು ಸಂವಿಧಾನ ವಿರೋಧಿ ಪ್ರವೃತಿಗೆ ಸಾಕ್ಷಿಯಾಗಿದೆ ಎಂದು ಮಾಜಿ ಮಹಾಪೌರ ಪುರುಷೋತ್ತಮ್ ದೂರಿದ್ದಾರೆ.

ಈಚೆಗೆ ಗಣರಾಜ್ಯೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲು ನಿರಾಕರಿಸಿರುವುದನ್ನು ಬಲವಾಗಿ ಖಂಡಿಸಿರುವ ಅವರು, ಸಂವಿಧಾನ ಹೆಸರಿನಲ್ಲಿ ವಿದ್ಯೆ, ಉದ್ಯೋಗ ಮತ್ತು ಉನ್ನತ ಹುದ್ದೆಗಳನ್ನು ಪಡೆದಿರುವ ನಿರ್ದೇಶಕರ  ಧೊರಣೆ ಖಂಡನೀಯ, ಸಂವಿಧಾನ ಶಿಲ್ಪಿಗೆ ಮಾಡಿದ ಅಪಮಾನವೆಂದು ಕಿಡಿಕಾರಿದ್ದಾರೆ.

ರಾಘವರಾವ್ ಅವರು ಪ್ರತಿಷ್ಟಿತ ಕೇಂದ್ರ ಸರ್ಕಾರದ ಸಂಸ್ಥೆಯೊಂದರಲ್ಲಿ ಮುಖ್ಯಸ್ಥರಾಗಿದ್ದು ಸಂವಿಧಾನ ಪ್ರಜ್ಞೆ, ರಾಷ್ಟ್ರಪ್ರಜ್ಞೆ ಮತ್ತು ಹೊಣೆಗಾರಿಕೆಗೆ ವಿರುದ್ಧವಾಗಿ ನಡೆದುಕೊಂಡಿರುವುದಕ್ಕೆ ಆಕ್ರೋಷ ವ್ಯಕ್ತಪಡಿಸಿದ್ದು, ಕೂಡಲೇ ಅವರನ್ನು ವಜಾಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: