ಕ್ರೀಡೆಮೈಸೂರು

ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ : ಜೆಎಸ್‍ಎಸ್ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ಮೈಸೂರು,ಫೆ.18:- ಮೈಸೂರು ವಿಶ್ವವಿದ್ಯಾನಿಲಯದ  2018-19 ನೇ ಸಾಲಿನ ಅಂತರ ವಲಯ ಅಂತರ ಕಾಲೇಜು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೈಸೂರು ನಗರದ ಬಿ ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪನವರು ಮುಖ್ಯ ಕಾರ್ಯನಿರ್ವಾಹಕರಾದ    ಪ್ರೊ ಬಿ.ವಿ ಸಾಂಬಶಿವಯ್ಯನವರು, ಪ್ರಭಾರ ಪ್ರಾಂಶುಪಾಲರಾದ ಪ್ರೊ. ಡಿ.ಎಸ್ ಸದಾಶಿವಮೂರ್ತಿ ರವರು, ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ ಕಾರ್ತಿಕ್‍ರವರು ಹಾಗೂ ಬೋಧಕ/ಬೋಧಕೇತರರು ಅಭಿನಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: