ಮೈಸೂರು

ಹುತಾತ್ಮ ಯೋಧರಿಗೆ ‘ಕಾವ್ಯ ನಮನ’

ಮೈಸೂರು,ಫೆ.19:- ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಅರಮನೆ ಉತ್ತರ ದ್ವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ನಿನ್ನೆ ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ ಮೈಸೂರು ವತಿಯಿಂದ ಹುತಾತ್ಮ ಯೋಧರಿಗೆ ‘ಕಾವ್ಯ ನಮನ’ ಕಾವ್ಯದ ಮೂಲಕ ಹುತಾತ್ಮ ಯೋಧರನ್ನು ನೆನೆದು ಈಗಿನ ಭಾರತೀಯ ಸೈನಿಕರಿಗೆ ಹುರಿದುಂಬಿಸುವ ಪದಗಳನ್ನು ಕವಿಗಳು ಕಾವ್ಯದ ಮೂಲಕ ವಾಚನ‌ ಮಾಡಿದರು.

ಈ ಕಾರ್ಯಕ್ರಮದ ಕರ್ತವ್ಯವನ್ನಾಗಿ ಅಷ್ಟೇ ಉದ್ಘಾಟನೆ ಮಾಡುತ್ತಿದ್ದೇನೆ ಎಂದ ನಾಡಿನ ಹೆಸರಾಂತ ಹಿರಿಯ ಸಾಹಿತಿ ಸಿ.ಪಿ‌.ಕೃಷ್ಣಕುಮಾರ್ ಅವರು ಬಹಳ ನೋವಿನಿಂದ ಹೇಳಿದರು.  ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೆನಪಿಸಿಕೊಂಡು ರೈತರಿಗಾಗಿ ಕುವೆಂಪುರವರು ನೇಗಿಲಯೋಗಿ ಎಂದು ಕರೆದಿದ್ದರು ಎಂದು ನೆನಪಿಸಿಕೊಂಡ ಅವರು ಯೋಧರನ್ನು ಕೋವಿಯ ಯೋಗಿ ಎಂದೂ ಕರೆಯಬಹುದು ಎಂದು ಹೇಳಿದರು. ಇಂದು ನಮ್ಮ ದೇಶದಲ್ಲಿ ಶಾಂತಿಯ ಅವಶ್ಯಕತೆ ಇದೆ. ಅದರೆ ಅದು ಅನಿವಾರ್ಯವಾಗಿ ಪ್ರತೀಕಾರದ ನಂತರವೇ ಸಿಗುವ ಸೂಚನೆ ಕಾಣುತ್ತಿದೆ ಎಂದರು. 1962 ರಲ್ಲಿ ನೆಹರು ಅವರು ಇದ್ದಾಗ ಚೀನಾ  ಭಾರತದ ಮೇಲೆ ಅನಿರೀಕ್ಷಿತ ಆಕ್ರಮಣ ಮಾಡಿದ್ದನ್ನು ನೆನಪಿಸಿಕೊಂಡರು. ಭಾರತಕ್ಕೆ ಚೀನ ಹಾಗೂ ಪಾಕಿಸ್ತಾನದ ಎರಡೂ ಬಗ್ಗಲು ಮುಳ್ಳು ಇದ್ದ ಹಾಗೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕವಿಗಳಾದ ಡಾ.ಜಯಪ್ಪ ಹೊನ್ನಾಳಿ , ಪ್ರೊ.ಗೋವಿಂದರಾಜು , ಡಾ‌.ಎಂ.ಬಿ.ಪಶುಪತಿ , ಮೀನಾಕ್ಷಿ ಬಿ.ಕೆ. , ಲತಾ ಮನೋಹರ್ , ಅಬ್ದುಲ್ ನಾಜಿರ್ , ಮಹಾದೇವನಾಯಕ್ , ಸುಗಂಧಮ್ಮ ಜಯಪ್ಪ , ನಾಗರತ್ನ ಪಿ‌.ಮಳವಳ್ಳಿ , ತ್ರಿವಿಕ್ರಮ ಪುರಾಣಿಕ್ , ಪ್ರೊ  ಈಶ ಕುಮಾರ್ , ಎಂ.ಬಿ. ಜಯಶಂಕರ್ , ಕೆರೋಡಿ ಎಂ.ಲೋಲಾಕ್ಷಿ , ಸುಬೇಂದ್ರಕುಮಾರ್ , ಮಮತಾ ಹರೀಶ್ , ಸಿ.ಎನ್.ಪ್ರಕಾಶ್ , ಅನಿತಾ ಅಶೋಕ್ , ದೇವರಾಜ್ ಪಿ.ಚಿಕ್ಕಳ್ಳಿ , ಕೆ.ಅರ್ .ಷಣ್ಮುಖಸ್ವಾಮಿ ,ಯಶೋಧಾ ನಾರಾಯಣ್  ಕವನ ವಾಚಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವೈ‌.ಡಿ.ರಾಜಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಪಶುವೈದ್ಯಾಧಿಕಾರಿ ಕ್ಯಾಪ್ಟನ್ ಡಾ.ತಿಮ್ಮಯ್ಯ ಸಿ.ಪಿ ಭಾಗವಹಿಸಿದ್ದರು.  ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಶೇಖರ್ ಅವರು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ , ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ ಹಾಗೂ ಇತರ ಸಾಹಿತಿಗಳು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: