ಪ್ರಮುಖ ಸುದ್ದಿ

ಚಿಕ್ಕಾಡೆ ಗ್ರಾಮ ಪಂಚಾಯತ್ ಸದಸ್ಯನ ಕೊಲೆ : ಓರ್ವ ಪೊಲೀಸ್ ವಶಕ್ಕೆ

ರಾಜ್ಯ(ಮಂಡ್ಯ)ಫೆ.19:- ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಕಳೆದ ರಾತ್ರಿ ಚಿಕ್ಕಾಡೆ ಗ್ರಾಮ ಪಂಚಾಯ್ತಿ ಸದಸ್ಯ 55 ವರ್ಷದ ತಿಮ್ಮೇಗೌಡ ಎಂಬವರು ಕೊಲೆಯಾಗಿದ್ದಾರೆ.

ಚಿಕ್ಕಾಡೆ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಗ್ರಾಮದ ಯಜಮಾನರಾಗಿದ್ದ ತಿಮ್ಮೇಗೌಡ ಜೊತೆಯಲ್ಲಿದ್ದ ತಿಮ್ಮೇಗೌಡರ ಪುತ್ರರಾದ ವಿನಾಯಕ, ವಿನೋದ್, ಹಾಗೂ ಗೌತಮ್ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ಗ್ರಾಮದಲ್ಲಿ ನಡೆಯುತ್ತಿದ್ದ ದೇವಿರಮ್ಮ ಜಾತ್ರೆಯಲ್ಲಿ ಆರೋಪಿಗಳಾದ ಇದೇ ಗ್ರಾಮದ ದೇವೇಗೌಡ,  ಇವರ ಅಣ್ಣ ಯೋಗೇಗೌಡ, ಇವರ ಮಗ ಮದನ ಹಾಗೂ ಸಂಬಂಧಿ ಕುಮಾರ ಏಕಾಏಕಿ ಲಾಂಗು ಮಚ್ಚು ಚಾಕು ತಂದು ಯಜಮಾನ ತಿಮ್ಮೇಗೌಡರಿಗೆ ಹೊಟ್ಟೆ ತಲೆ ಭಾಗಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.  ಈ ಸಂದರ್ಭದಲ್ಲಿ ದೇವೇಗೌಡನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆಗೆ ಪ್ರೇಮಿಗಳ ವಿವಾಹ ಸಂಬಂಧ ಯಜಮಾನ ತಿಮ್ಮೇಗೌಡ ತೀರ್ಪುಕೊಟ್ಟಿದ್ದೇ ಕಾರಣ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: