
ದೇಶ
ಹುತಾತ್ಮ ಯೋಧರ ಕುಟುಂಬದ ನೆರವಿಗೆ ಮುಂದಾದ ಮೊಹಮ್ಮದ್ ಶಮಿ
ನವದೆಹಲಿ,ಫೆ.18- ಜಮ್ಮು–ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡಲು ಭಾರತದ ವೇಗಿ ಮೊಹಮ್ಮದ್ ಶಮಿ ಮುಂದಾಗಿದ್ದಾರೆ.
ನಾವು ದೇಶದ ಪರ ಕ್ರಿಕೆಟ್ ಆಡುತ್ತಿದ್ದರೆ, ಸೈನಿಕರು ಗಡಿಯಲ್ಲಿ ನಿಂತು ನಮ್ಮನ್ನೆಲ್ಲಾ ಕಾಪಾಡುತ್ತಾರೆ. ನಮ್ಮ ಯೋಧರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಅವರೊಂದಿಗೆ ಸದಾ ಕಾಲ ಇರುತ್ತೇವೆ ಎಂದು ಶಮಿ ಹೇಳಿದ್ದಾರೆ.
ಸಿಆರ್ಪಿಎಫ್ ಯೋಧರಿಗೆ ಧನ ಸಹಾಯ ಮಾಡುವೆ ಎಂದು ಗುರುವಾರ ತಿಳಿಸಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್, ಟ್ವಿಟರ್ನಲ್ಲಿ ಭಾವನಾತ್ಮಕ ವಿಡಿಯೋ ಹಾಕಿ, ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಸಹಾಯ ಹಸ್ತ ನೀಡುವಂತೆ ತನ್ನ ಅಭಿಮಾನಿಗಳು ಹಾಗೂ ದೇಶದ ಪ್ರಜೆಗಳನ್ನು ಕೇಳಿಕೊಂಡಿದ್ದರು. (ಎಂ.ಎನ್)