ಪ್ರಮುಖ ಸುದ್ದಿ

ಸಾಲಬಾಧೆ : ಬ್ಯಾಂಕ್ ನೋಟೀಸ್ ಗೆ ಹೆದರಿ ರೈತ ಆತ್ಮಹತ್ಯೆ

ರಾಜ್ಯ(ಮಂಡ್ಯ)ಫೆ.19:- ಮಂಡ್ಯಕ್ಕೆ ಸಿಎಂ ಬರುವ ದಿನವೇ ಸಾಲಬಾಧೆಯಿಂದ ರೈತರೋರ್ವರು ಬ್ಯಾಂಕ್ ನೋಟೀಸ್ ಗೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಮಂಡ್ಯ‌ ತಾಲೂಕಿನ ಗುಡಿಗೇನಹಳ್ಳಿ ಗ್ರಾಮದ ಶಿವಲಿಂಗಯ್ಯ (40) ಎಂದು ಗುರುತಿಸಲಾಗಿದೆ. ಇವರು ಡೆತ್ ನೋಟ್ ಬರೆದಿಟ್ಟು ತನ್ನ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸಾಲ ಸೇರಿ ಸುಮಾರು 10 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು. ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು, ಭತ್ತ ಬೆಳೆಯುತ್ತಿದ್ದರು.

ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: