ದೇಶಪ್ರಮುಖ ಸುದ್ದಿ

ಕೇಂದ್ರೀಯ ಪಡೆಗಳಿಂದ ನನ್ನ ಫೋನ್ ಕದ್ದಾಲಿಕೆ: ಮಮತಾ ಬ್ಯಾನರ್ಜಿ ಆರೋಪ

ಕೊಲ್ಕತ್ತಾ (ಫೆ.19): ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಧೀನದಲ್ಲಿರುವ  ಭದ್ರತಾ ಪಡೆಗಳು ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿ.ಆರ್.ಪಿ.ಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಮಮತಾ ಈ ಆರೋಪ ಮಾಡಿದ್ದಾರೆ.

ಚುನಾವಣೆಗೆ ಮುನ್ನ ಇಂತಹ ದಾಳಿಗಳು ನಡೆಯಬಹುದು ಎಂಬ ಬಗ್ಗೆ ಕೇಂದ್ರ ಸರ್ಕಾರವು ಫೆ.8ರಂದು ಗುಪ್ತಚರ ವಿಭಾಗದಿಂದ ಮಾಹಿತಿ ಪಡೆದಿತ್ತು. ಇಷ್ಟಾಗಿಯೂ ಯಾಕೆ ಕ್ರಮ ಕೈಗೊಂಡಿಲ್ಲ? ಇಷ್ಟಾಗಿಯೂ 78 ತುಕಡಿಗಳನ್ನು ಏಕಕಾಲದಲ್ಲಿ ಸಂಚರಿಸಲು ಅವಕಾಶ ನೀಡಿದ್ದೇಕೆ? ನನ್ನ ದೂರವಾಣಿ ಕರೆಗಳನ್ನು ಕೂಡಾ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಗುಪ್ತಚರ ವರದಿಗಳಿವೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಫೆ.14ರ ಆತ್ಮಹತ್ಯಾ ಬಾಂಬ್ ದಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಕೆಲ ವಿಧ್ವಂಸಕ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಮಮತಾ ಆಪಾದಿಸಿದರು. ಪುಲ್ವಾಮ ಘಟನೆಯ ಬಳಿಕ ದೇಶದಲ್ಲಿ ಆರೆಸ್ಸೆಸ್ ಸೇರಿದಂತೆ ಹಲವು ಸಂಘಟನೆಗಳು ಜನರನ್ನು ವಿಭಜಿಸಲು ಪಿತೂರಿ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ, ಪುಲ್ವಾಮಾ ದಾಳಿಗೆ ಗುಪ್ತಚರ ವೈಫಲ್ಯ ಕಾರಣ ಎಂದು ಆಪಾದಿಸಿ, ರಾಷ್ಟ್ರೀಯ ಭದ್ರತಾ ಸಲಹೆಗಾರರ ಪಾತ್ರವನ್ನು ಪ್ರಶ್ನಿಸಿದ್ದರು. (ಎನ್.ಬಿ)

Leave a Reply

comments

Related Articles

error: