ಮೈಸೂರು

ಮನೆ ಕೆಲಸ ಮಾಡುತ್ತ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ :  3,00,000ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣ ವಶ

ಮೈಸೂರು,ಫೆ.20:-  ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರಂ ಬಡಾವಣೆ ವಾಸಿ ಬಾಲಾಜಿ ಎಂಬವರು ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಕೈಗೊಂಡ ಲಕ್ಷ್ಮೀಪುರಂ ಪೊಲೀಸರು  ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಶ್ರೀನಿವಾಸ ಬಿನ್ ರಾಮಕೃಷ್ಣೇಗೌಡ, (35) ಕೆ.ಆರ್. ಮೊಹಲ್ಲಾ, ಮೈಸೂರು, ಸ್ವಂತ ಸ್ಥಳ ಬಲ್ಲೇನಹಳ್ಳಿ, ಕೆ.ಆರ್. ಪೇಟೆ ತಾಲೂಕು, ಮಂಡ್ಯ ಜಿಲ್ಲೆ ಎಂದು ಗುರುತಿಸಲಾಗಿದೆ. ಈತನನ್ನು ದಸ್ತಗಿರಿ ಮಾಡಿ ವಿಚಾರ ಮಾಡಲಾಗಿ, ಆರೋಪಿ ಬಾಲಾಜಿಯವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು, ಅವರ ಮನೆಯಲ್ಲಿ ಮನೆಯವರ ಕಣ್ಣುತಪ್ಪಿಸಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಈತನಿಂದ  3,00,000ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ  ಡಾ. ವಿಕ್ರಮ್ ಅಮಟೆರವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಎ.ಸಿ.ಪಿ.ರವರಾದ ಎಂ.ಧರ್ಮಪ್ಪ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್.ಗಂಗಾಧರ್ ಮತ್ತು ಸಿಬ್ಬಂದಿಗಳಾದ ಉಮೇಶ್, ಪುಟ್ಟಸ್ವಾಮಿ.ಟಿ. ಸುದೀಪ್‍ಕುಮಾರ್, ಸಿದ್ದಪ್ಪಾಜಿ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: