ಮೈಸೂರು

ಮನೆ ಕಳ್ಳತನ ಹಾಗೂ ಬಸ್‍ಗಳಲ್ಲಿ ಪ್ರಯಾಣಿಕರ ಬ್ಯಾಗ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ  ಬಂಧನ

ಮೈಸೂರು,ಫೆ.20:- ಮೈಸೂರು ನಗರ ಲಷ್ಕರ್ ಪೊಲೀಸರು  ಸಬರ್ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ಕೈಗೊಂಡು ಅನುಮಾನಾಸ್ಪದವಾಗಿ ಬಸ್‍ಗಳನ್ನು ಹತ್ತುವುದು ಮತ್ತು ಇಳಿಯುವುದು ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮೊಹಮ್ಮದ್ ಇಮ್ರಾನ್ @ ಇಮ್ರಾನ್ ಬಿನ್ ಲೇಟ್ ನಸೀರ್ ಅಹಮ್ಮದ್, (37 ) ತ್ಯಾಗರಾಜ ಕಾಲೋನಿ, 24ನೇ ಬ್ಲಾಕ್, ಲಷ್ಕರ್ ಮಸೀದಿ ಪಕ್ಕ, ಮಡಿಕೇರಿ ಟೌನ್, ಕೊಡಗು ಜಿಲ್ಲೆ ಎಂದು ಗುರುತಿಸಲಾಗಿದೆ. ಈತನನ್ನು  ದಸ್ತಗಿರಿ ಮಾಡಿ, ವಿಚಾರಣೆಗೊಳಪಡಿಸಲಾಗಿ, ಈತ ಲಷ್ಕರ್ ಠಾಣಾ ವ್ಯಾಪ್ತಿಯ ಹಳ್ಳದ ಕೇರಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದು, ಸಬರ್ ಬಸ್ ನಿಲ್ದಾಣದಲ್ಲಿ ಮಂಗಳೂರು ಕಡೆಗೆ ಹೋಗುವ ಬಸ್‍ನಿಂದ ಪ್ರಯಾಣಿಕರ  ಚಿನ್ನಾಭರಣವಿದ್ದ ಬ್ಯಾಗನ್ನು ಕಳ್ಳತನ ಮಾಡಿದ್ದ ಕುರಿತು ತಿಳಿಸಿದ್ದು, ಈತನಿಂದ 4.35.000ರೂ. ಮೌಲ್ಯದ 145 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯದಿಂದ ಲಷ್ಕರ್ ಠಾಣೆಯ 02 ಸ್ವತ್ತು ಕಳುವು ಪ್ರಕರಣಗಳು ಪತ್ತೆಯಾಗಿದೆ.  ಈ ಪತ್ತೆ ಕಾರ್ಯವನ್ನು ಅಪರಾಧ ವಿಭಾಗದ ಡಿ.ಸಿ.ಪಿ. ಡಾ.ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ. ಗಜೇಂದ್ರಪ್ರಸಾದ್ ಅವರ ನೇತೃತ್ವದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್, ಮುನಿಯಪ್ಪ.ಎನ್, ಪಿ.ಎಸ್.ಐ  ಪೂಜಾ, ಎ.ಎಸ್.ಐ. ಶ್ರೀನಿವಾಸ್, ಮಹದೇವಪ್ಪ, ಸಿಬ್ಬಂದಿಗಳಾದ ಪರಶಿವಮೂರ್ತಿ, ಲೋಕೇಶ, ಪ್ರದೀಪ್, ಪ್ರತೀಪ, ಸಿದ್ದರಾಜು, ಶಿವಶಂಕರ್ ಮೂರ್ತಿ, ಸಿದ್ದಯ್ಯ, ರಮೇಶ್ ರವರುಗಳು  ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: