ಮೈಸೂರು

ಕುಂಭಮೇಳದಲ್ಲಿ ಮಹಾಲಕ್ಷ್ಮಿ ಅಮ್ಮನವರಿಗೆ ಅಪಚಾರ : ಭಕ್ತರಿಂದ ಆರೋಪ

ಮೈಸೂರು,ಫೆ.20:- ವಿಶ್ವವಿಖ್ಯಾತ ಕುಂಭಮೇಳದಲ್ಲಿ ಮಹಾಲಕ್ಷ್ಮಿ ಅಮ್ಮನವರಿಗೆ ಅಪಚಾರವೆಸಗಿದ್ದಾರೆ ಎನ್ನಲಾದ ಆರೋಪ ಕೇಳಿ ಬಂದಿದೆ.

ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಕಳೆದ ಮೂರು ದಿನಗಳಿಂದ 11ನೇ ಕುಂಭಮೇಳ ವಿಜೃಂಭಣೆಯಿಂದ ಜರುಗಿತ್ತು. ತ್ರಿವೇಣಿ ಸಂಗಮದ ಗುಂಜಾನರಸಿಂಹ ಸ್ವಾಮಿ ದೇವಾಲಯದ ಒಳಭಾಗವಿರುವ ಮಹಾಲಕ್ಷ್ಮಿ ಅಮ್ಮನವರ ಗರ್ಭಗುಡಿಗೆ ಬೀಗ ಹಾಕಿ ದೇವಸ್ಥಾನದ ಅರ್ಚಕರು ಅಪಚಾರವೆಸಗಿದ್ದಾರೆ ಎನ್ನಲಾಗಿದೆ.

ಭಕ್ತಾದಿಗಳು ಕೇವಲ ಗರ್ಭಗುಡಿಯ ಬಾಗಿಲ ಬಳಿಯೇ ನಿಂತು ದರ್ಶನ ಪಡೆದಿದ್ದಾರೆ. ಘಟನೆ ತಡರಾತ್ರಿ ನಡೆದಿದ್ದು, ಲಕ್ಷಾಂತರ ಭಕ್ತರ ದರ್ಶನ ಭಾಗ್ಯಕ್ಕೆ ಗುಂಜಾನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ತಣ್ಣೀರೆರಚಿದ್ದಾರೆ ಎನ್ನಲಾಗಿದೆ. ಗುಂಜಾನರಸಿಂಹ ದೇವಾಲಯದ ಒಳಗಡೆ ಪ್ರಮುಖ ಗರ್ಭಗುಡಿಯಾದ ಮಹಾಲಕ್ಷ್ಮಿ ಅಮ್ಮನವರ ಗರ್ಭಗುಡಿಗೆ ಬೀಗ ಹಾಕಲಾಗಿತ್ತು. ಆಡಳಿತ ಮಂಡಳಿ ಮತ್ತು ಅರ್ಚಕರ ವಿರುದ್ಧ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕುಂಭಮೇಳದ ಕೊನೆಯ ದಿನ ತಡರಾತ್ರಿ ಈ ಘಟನೆ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: