ಮೈಸೂರು

ಸುತ್ತೂರು ವಸತಿ ಶಾಲೆಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಮೈಸೂರು,ಫೆ.20:-  ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಯಿಂದ ಇತ್ತೀಚೆಗೆ ಹುತಾತ್ಮರಾದ ವೀರ ಯೋಧರಿಗೆ ಸುತ್ತೂರು ಜೆಎಸ್‍ಎಸ್ ವಸತಿ ಶಾಲೆಯ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಯಕ್ರಮದ ಮೊದಲಿಗೆ ಮಕ್ಕಳು ವೀರ ಯೋಧರ ಕುರಿತಾದ ಗೀತೆಗಳನ್ನು ಹಾಡಿದರು. ಸಂಸ್ಥೆಯ ಸಂಯೋಜನಾಧಿಕಾರಿ   ಜಿ.ಎಲ್.ತ್ರಿಪುರಾಂತಕ ಅವರು ಹುತಾತ್ಮರಾದ ದೇಶ ಕಾಯುವ ಯೋಧರ ತ್ಯಾಗ-ಬಲಿದಾನಗಳ ಕುರಿತು ಮಾತನಾಡಿದರು. ಅವರುಗಳ ಆತ್ಮಕ್ಕೆ ಶಾಂತಿ ಕೋರುವ ಮೂಲಕ ನುಡಿ ನಮನಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ‘ಭಾರತ್ ಮಾತಾ ಕಿ ಜೈ’ ‘ವೀರ್‍  ಯೋಧ್ ಅಮರ್ ರಹೇ’  ಎಂಬ ವಿದ್ಯಾರ್ಥಿಗಳ ಘೋಷಣೆಗಳು ಮುಗಿಲು ಮುಟ್ಟಿದವು.   ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮುಖಾಂತರ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಿ.ಆರ್.ಪಿ.ಎಫ್ ಹಾಗೂ ಅಶೋಕ ಚಕ್ರದ ವಿನ್ಯಾಸವನ್ನು ರಚಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಹಾಗೂ ನೌಕರ ವರ್ಗದವರು ಹಾಜರಿದ್ದರು.  (ಎಸ್.ಎಚ್)

 

 

Leave a Reply

comments

Related Articles

error: