ಮೈಸೂರು

ಕಾರ್ಯಾಗಾರಕ್ಕೆ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ‘ಗೆಟ್ ಔಟ್’ ಎಂದ್ರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು,ಫೆ.20:- ಮಾದರಿ ನೀತಿ‌ ಸಂಹಿತೆ ತರಬೇತಿ ಕಾರ್ಯಾಗಾರಕ್ಕೆ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಗೆಟ್ ಔಟ್ ಎಂದ ಪ್ರಸಂಗ  ನಡೆದಿದೆ.

ಇಂದು ಸೆನೆಟ್ ಭವನದಲ್ಲಿ ಮಾದರಿ ನೀತಿ‌ ಸಂಹಿತೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಆದರೆ ಸಮಯಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಗರಂ ಆಗಿದ್ದು, ತರಬೇತಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್ ಔಟ್ ಎಂದಿದ್ದಾರೆ.ಯಾರಿಗೂ ಮಾಹಿತಿ ಕೊಟ್ಟಿಲ್ವ? ಯಾಕೆ ಇಷ್ಟು ತಡವಾಗಿ ಅಧಿಕಾರಿಗಳು ಬರುತ್ತಿದ್ದಾರೆ. ತಡವಾಗಿ ಬಂದವರನ್ನು ಒಳಗೆ ಬಿಡಬೇಡಿ‌. ಬಾಗಿಲು ಹಾಕಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ತರಬೇತಿ ನೀಡಲು ಆಯೋಜನೆ ಮಾಡಿದ್ದ ಕಾರ್ಯಾಗಾರದ ಮೊದಲ ದಿನವೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನನಗೆ ಮೊದಲ ದಿನದ ತರಬೇತಿಯಲ್ಲೇ ತುಂಬಾ ನೋವಾಗಿದೆ. ಮುಂದಿನ ದಿನಗಳಲ್ಲಿ ಈ  ರೀತಿ ಆಗಬಾರದು ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: