ಪ್ರಮುಖ ಸುದ್ದಿಮೈಸೂರು

ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು ಕೈಗೊಂಡ ಬೈಕ್ ರ್ಯಾಲಿ ಹೇಗಿತ್ತು?

ಮೈಸೂರು,ಫೆ.20 : ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ನಗರದ ಸಮಾನ ಮನಸ್ಕರ ತಂಡವೊಂದು ದೆಹಲಿ ಪಾರ್ಲಿಮೆಂಟ್ ವರೆಗೂ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಯಶಸ್ವಿಯಾಯಿತು ಎಂದು ಮೋದಿಯವರ ಅಭಿಮಾನಿ ರಾಕೇಶ್ ಮಿಥಲ್ ತಿಳಿಸಿದರು.

ನಗರದ ನಾಲ್ಕು ಜನ ಸಮಾನ ಮನಸ್ಕರೊಂದಿಗೆ ಕೋಟೆ ಆಂಜನೇಯ ದೇವಸ್ಥಾನದಿಂದ ಫೆ.2ರಂದು ಆರಂಭಗೊಂಡಿದ್ದ ರ್ಯಾಲಿಯು ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಆಗ್ರಾ, ಮಥುರ ಮುಖಾಂತರ ಫೆ.8ರಂದು ದೆಹಲಿ ತಲುಪಿತು, ಆರು ದಿನಗಳಲ್ಲಿ ಸುಮಾರು ಮೂರು ಸಾವಿರ ಕಿಲೋ ಮೀಟರ್ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿದ್ದು, ದಾರಿಯುದ್ದಕ್ಕೂ ಮೋದಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಾಗೃತಿ  ಸಭೆ ನಡೆಸಿದೆವು, ಆ ಸಭೆಗೆ ಅಭೂತ ಪೂರ್ವ ಸ್ಪಂಧನೆ ದೊರೆಯಿತು ಅಲ್ಲದೇ ದೇಶದಾಧ್ಯಂತ ಅಸಂಖ್ಯಾತ ಮೋದಿ ಅಭಿಮಾನಿಗಳಿರುವುದು ಮುಂದಿನ ಅವಧಿಗೂ ಮೋದಿಯವರೇ ಪ್ರಧಾನಿಯಾಗಬೇಕು ಇದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಹಲವಾರು ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದಿರುವೆ, ಆದರೆ ಪ್ರಧಾನಿ ಮೋದಿಯವರ ಆಡಳಿತ ವೈಖರಿಯಿಂದ ಪ್ರೇರಿತನಾಗಿದ್ದು ಅವರೇ ಮುಂದಿನ ಅವಧಿಗೆ ಪ್ರಧಾನಿಯಾಗುವುದರಿಂದ ದೇಶವು ಸುರಕ್ಷಿತವಾಗಿರುವುದು ತಿಳಿಸಿದರು.

ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ರಕ್ಷಿತ್ ಹಾಗೂ ಆಕಾಶ್ ಗೋಷ್ಠಿಯಲ್ಲಿ ಇದ್ದರು. (ವರದಿ :ಕೆ.ಎಂ.ಆರ್)

Leave a Reply

comments

Related Articles

error: