ಪ್ರಮುಖ ಸುದ್ದಿಮೈಸೂರು

ಸುಳ್ಳು ಜಾತಿ ಪ್ರಮಾಣ ಪತ್ರ ಮಹಾನಗರ ಪಾಲಿಕೆ ಸದಸ್ಯನ ವಜಾಕ್ಕೆ ಒತ್ತಾಯ

ಮೈಸೂರು, ಫೆ.20 : ಪರಿಶಿಷ್ಟ ಜಾತಿಗೆ ಮೀಸಲಿದ್ದ ಕ್ಷೇತ್ರದಲ್ಲಿ ಸುಳ್ಳು ಪ್ರಮಾಣ ಪತ್ರ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಹಾನಗರ ಪಾಲಿಕೆ ಸದಸ್ಯ ಗುರುವಿನಾಯಕ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘ ಅಧ‍್ಯಕ್ಷ ಎಸ್.ಹೆಚ್.ಸುಭಾಷ್ ಒತ್ತಾಯಿಸಿದ್ದಾರೆ.

ಮೈಸೂರು ಭಾಗದ ಜಿಲ್ಲೆಗಳಲ್ಲಿ ಪರಿವಾರ, ಬೆಸ್ತ ಜಾತಿಗೆ ಸೇರಿದವರೂ ನಾಯಕ ಎಂದು ನಮೂದಿಸಿಕೊಂಡು ಪರಿಶಿಷ್ಟ ಪಂಗಡದ ಜಾತಿ ಪದ್ಧತಿ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಬೇಜವಾಬ್ದಾರಿತನ ಹಾಗೂ ಆಮಿಷಗಳ ಕಾರಣ ಇವನ್ನು ನೀಡುತ್ತಿರುವವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಸ್.ಎಚ್. ಸುಭಾಷ್, ಈ ರೀತಿಯ ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದು ನೌಕರಿ, ಸರ್ಕಾರಿ ಸೌಲಭ್ಯ ಮೊದಲಾದವನ್ನು ಗಿಟ್ಟಿಸಿಕೊಳ್ಳುವವರ ಕಾರಣದಿಂದಾಗಿ ನಿಜವಾದ ನಾಯಕ ಸಮುದಾಯದವರಿಗೆ ಸಮಸ್ಯೆಯುಂಟಾಗುತ್ತಿದೆ ಎಂದು ದೂರಿದರು

ಇದೇ ರೀತಿ, ನಿವೃತ್ತ ಡಿಸಿಪಿ ಚಲುವರಾಜು ಅವರ ಪುತ್ರ ಮತ್ತು ಪಾಲಿಕೆ ವಾರ್ಡ್ ಸಂಖ್ಯೆ 18 ರ ಸದಸ್ಯ ಗುರುವಿನಾಯಕ ಮತ್ತು ಸಹೋದರಿ ಗ್ರೀಷ್ಮ ಅವರಿಗೆ ನಾಯಕ ಎಂದು ನೀಡಿದ್ದ ಪ್ರಮಾಣಪತ್ರ ರದ್ದಾಗಿದೆ.

ಅಲ್ಲದೆ, ಕುವೆಂಪು ವಿವಿ ಪ್ರೊಫೆಸರ್ ಆಗಿದ್ದ ಮಧುಸೂದನ್ ಅವರ ನಾಯಕ ಎಂಬ ಜಾತಿ ಪ್ರಮಾಣ ಪತ್ರವೂ ತಮ್ಮೆಲ್ಲರ ಹೋರಾಟದ ಕಾರಣ ರದ್ದಾಗಿದೆ. ಇದೇ ರೀತಿ ಬೆಳಕಿಗೆ ಬಾರದ ಹಲವಾರು ಪ್ರಕರಣಗಳಿದ್ದು, ತಹಸೀಲ್ದಾರರು, ಗ್ರಾಮ ಲೆಕ್ಕಿಗರು ಮೊದಲಾದವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಕೂಲಂಕಶ ಪರಿಶೀಲನೆ ನಡೆಸದಿರುವುದರಿಂದಲೇ ಈ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರಗಳು ಸುಳಭವಾಗಿ ಸಿಗುತ್ತಿವೆ.

ಆದ್ದರಿಂದ ಆ ರೀತಿಯ ಪ್ರಮಾಣ ಪತ್ರವನ್ನು ಬೇವಾಬ್ದಾರಿ ಅಥವಾ ಆಮಿಷದಿಂದ ನೀಡುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಅಕ್ರಮ ತಡೆಗಟ್ಟಬಹದಾಗಿದೆ ಎಂದು ಅಭಿಪ್ರಾಯಪಟ್ಟರು.

ಗೋಕುಲ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: