ಮೈಸೂರು

ಹಿರಿಯ ನಟ “ಚಾಮಯ್ಯ ಮೇಷ್ಟ್ರು” ಕೆಎಸ್ ಅಶ್ವತ್ಥ್ 7ನೇ ವರ್ಷದ ಪುಣ್ಯ ಸ್ಮರಣೆ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟರಾಗಿದ್ದ ಕೆ.ಎಸ್.ಅಶ್ವತ್ಥ್ ಅವರ 7ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮೈಸೂರು ಪ್ರಜ್ಞಾವಂತರ ವೇದಿಕೆಯ ವತಿಯಿಂದ ಸರಸ್ವತಿಪುರಂನಲ್ಲಿರುವ ಕೆ.ಎಸ್.ಅಶ್ವತ್ಥ್ ಉದ್ಯಾನವನದಲ್ಲಿ “ಚಾಮಯ್ಯ ಮೇಷ್ಟ್ರನೆನಪು” ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಶ್ವತ್ಥ್ ಅವರ ಭಾವಚಿತ್ರಕ್ಕೆ ಬಿಜೆಪಿ ನಗರ ಅಧ್ಯಕ್ಷರಾದ ಡಾ. ಮಂಜುನಾಥ್ ಅವರು ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಡಾ.ಮಂಜುನಾಥ್ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಅಶ್ವತ್ಥ್ ಅವರ ಕೊಡುಗೆ ಅಪಾರವಾದದ್ದು. ಸುಮಾರು 370 ಚಲನಚಿತ್ರ, ಮತ್ತು ಮೂರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತಿ ಹೆಚ್ಚು ಕುಟುಂಬ ಪ್ರಧಾನ ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ ಚಿತ್ರಪ್ರೇಮಿಗಳ ಮನಗೆದ್ದಿರುವ ಅವರು, ಚಾಮಯ್ಯ ಮಾಸ್ಟರ್ ಪಾತ್ರದ ಮೂಲಕ ಗುರು-ಶಿಷ್ಯರ ಬಾಂಧವ್ಯ ಬಿಂಬಿಸುವ “ನಾಗರಹಾವು” ಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದರು. ಈ ಚಿತ್ರದ ನಂತರ ಚಿತ್ರಪ್ರೇಮಿಗಳ ಮನದಲ್ಲಿ ಅವರು “ಚಾಮಯ್ಯ ಮಾಸ್ಟರ್” ಎಂದೇ ಪರಿಚಿತರಾದರು ಎಂದರು.

ಬಹುತೇಕ ಚಿತ್ರಗಳಲ್ಲಿ ಅಶ್ವತ್ಥ್ ಅವರ ಪೋಷಕ ಪಾತ್ರಗಳ ಪರಿಪೂರ್ಣ ನಟನೆಯಿಂದ ಚಿತ್ರದ ಮೌಲ್ಯಗಳ ಹೆಚ್ಚಾಗಿವೆ. ಅವರ ಮನೆಯ ಬಳಿಯಿರುವ ಅಶ್ವತ್ಥ್ ಉದ್ಯಾನವನ್ನು ಅಭಿವೃದ್ಧಿ ಪಡಿಸುವ ಕಡೆ ನಗರಪಾಲಿಕೆ ಹೆಚ್ಚು ಗಮನ ನೀಡಬೇಕು. ರಾಜ್ಯ ಸರ್ಕಾರ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಿಸುವ ಮೂಲಕ ಯುವ ಕಲಾವಿದರಿಗೆ ಸ್ಫೂರ್ತಿ ನೀಡಬೇಕೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ನಗರಪಾಲಿಕೆಯ ಮಾ.ವಿ. ರಾಂಪ್ರಸಾದ್, ಎಂ.ಡಿ.ಪಾರ್ಥಸಾರಥಿ, ಬಿಜೆಪಿ ಮುಖಂಡರಾದ ಜೋಗಿ ಮಂಜು, ಲಕ್ಷ್ಮಿದೇವಿ, ಜೆಡಿಎಸ್ ಮುಖಂಡರಾದ ಬಸವರಾಜು, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸಂದೀಪ್, ಮಂಜುನಾಥ್, ರಾಜಗೋಪಾಲ್, ಮಧು ಭಾಗವಹಿಸಿದ್ದರು.

Leave a Reply

comments

Related Articles

error: