ಪ್ರಮುಖ ಸುದ್ದಿಮೈಸೂರು

ಸಿದ್ಧಗಂಗಾಶ್ರೀಗಳ ಗುರುನಮನ ನಾಳೆ

ಮೈಸೂರು, ಫೆ.20 : ಸಿದ್ಧಲಿಂಗೇಶ್ವರಸ್ವಾಮಿ ಸಮಿತಿ ಟ್ರಸ್ಟ್ ಮತ್ತು ಸಿದ್ಧಲಿಂಗೇಶ್ವರಸ್ವಾಮಿ ಯುವಕ ಮಂಡಲ್ ವತಿಯಿಂದ ನಾಳೆ (21) ಸಂಜೆ 5ಕ್ಕೆ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಗುರುನಮನ ಸಲ್ಲಿಸಲಾಗುವುದು ಎಂದು ಸಿದ್ಧಲಿಂಗೇಶ್ವರಸ್ವಾಮಿ ಯುವಕ ಮಂಡಲ್ ಅಧ್ಯಕ್ಷ ಪಿ.ಎಂ.ಮಂಜುನಾಥ್ ತಿಳಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದು, ಬೇಬಿಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಅರಮನೆ ಜಪದಕಟ್ಟೆ ಮಠದ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಪ್ರೊ.ಸಿ.ಜಿ.ಉಷಾದೇವಿ ನುಡಿನಮನ ಸಲ್ಲಿಸುವರು. ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಮತ್ತಿತರರು ಭಾಗವಹಿಸುವರು ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ  ನಿತಿನ್ ರಾಜಾರಾಮ್ ಶಾಸ್ತ್ರಿ ಮತ್ತು ತಂಡದಿಂದ ವಚನ ಗಾಯನ ಆಯೋಜಿಸಲಾಗಿದೆ. ರಾತ್ರಿ 9ಕ್ಕೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮ ಆಯೋಜಕರಾದ ವಿರೂಪಾಕ್ಷ, ಚಂದ್ರಶೇಖರ್, ವಿಜಯಕುಮಾರ್, ಆರ್.ಅರುಣ್ ಸುದ್ದಿಗೋಷ್ಠಿಯಲ್ಲಿ ಇದ್ದರು (ವರದಿ : ಕೆ.ಎಂ.ಆರ್)

Leave a Reply

comments

Related Articles

error: