ಸುದ್ದಿ ಸಂಕ್ಷಿಪ್ತ
ನಿರ್ದೇಶಕನ ವಜಾಕ್ಕೆ ಒತ್ತಾಯ
ಮೈಸೂರು,ಫೆ.20 :ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಹಿಂಜರಿದ ಸಂವಿಧಾನ ವಿರೋಧಿ ಸಿ.ಎಫ್.ಟಿ.ಆರ್.ಐ ನಿರ್ದೇಶಕನನ್ನು ಅಮಾನತ್ತು ಮಾಡಬೇಕೆಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ ಒತ್ತಾಯಿಸಿದೆ.
ಜ.26ರಂದು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಅವರು ಪ್ರೊಟೋಕಾಲ್ ನ್ಲಲಿ ಇಲ್ಲವೆಂದು ನಿರಾಕರಿಸಿರುವುದಕ್ಕೆ ಮಹಾಮಂಡಲು ವಿರೋಧ ವ್ಯಕ್ತಪಡಿಸಿದ್ದು ಕೂಡಲೇ ಅವರನ್ನು ವಜಾ ಗೊಳಿಸಬೇಕೆಂದು ತಿಳಿಸಲಾಗಿದೆ. (ಕೆ.ಎಂ.ಆರ್)