ಪ್ರಮುಖ ಸುದ್ದಿಮೈಸೂರು

ಫೆ.24ರಂದು ವಚನ ಗಾಯನ ಸ್ಪರ್ಧೆ

ಪಂ.ಪುಟ್ಟರಾಜ ಗವಾಯಿ ರಚನೆ ವಚನಗಳೇ ಕಡ್ಡಾಯ

ಮೈಸೂರು.ಫೆ.20 :ಶ್ರೀವೀರೇಶ್ವರ ಪುಣ್ಯಾಶ್ರಮ ಗದಗ, ಪಂ.ಪಂಚಾಕ್ಷರ ಗವಾಯಿಗಳವರ ಸ್ನಾತಕೋತ್ತರ ಸಂಗೀತ ಕೇಂದ್ರ ಗದಗ, ಶ್ರೀಗುರು ಪುಟ್ಟರಾಜ ಸಂಗೀತ ಸಭಾ ಮೈಸೂರು ಹಾಗೂ ಧಾರವಾಡದ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯಿಂದ ವಚನ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟ ಎಂದು ಎರಡು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಮೂರು ಸ್ಪರ್ಧಿಗಳನ್ನು ಮೈಸೂರಿನಲ್ಲಿ ನಡೆಯುವ ಗುರುಗಳ ವಚನ ಸಂಗೀತೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು.

ರಾಜ್ಯಮಟ್ಟದ ಸ್ಪರ್ಧೆ ವಿಜೇತರಿಗೆ 20, 15 ಹಾಗೂ 10 ಸಾವಿರ ರೂಗಳ ನಗದು ಹಾಗೂ ಬಿರುದು ನೀಡಿ ಸನ್ಮಾನಿಸಲಾಗುವುದು

ಷರತ್ತು : ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ವಚನಗಳನ್ನೇ ಹಾಡಬೇಕು, 15 ರಿಂದ 25 ವರ್ಷದೊಳಗಿರಬೇಕು, ಸಹವಾಧ್ಯ ಕಡ್ಡಾಯ, ತಾವೇ ಕರೆತರಬೇಕು. ದಿ.24ರ ಬೆಳಗ್ಗೆ 10 ಗಂಟೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದೆ. ಮಾ.31ರಂದು ಗದಗಿನ ಆಶ್ರಮದಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ. ವಿವರಗಳಿಗೆ ಮೊ.ಸಂ. 9880543217, 9945057633 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: