ಮೈಸೂರು

ಅಧಿಕಾರದ ಹಪಹಪಿ ಬೇಡ; ನಿಸ್ವಾರ್ಥ ಸೇವೆಯೇ ಜೀವನದ ಗುರಿಯಾಗಲಿ : ಬೈಲಕುಪ್ಪೆ ಪಿಡಿಓ ಶಿವಯೋಗ

ಬೈಲಕುಪ್ಪೆ: ಅಧಿಕಾರಕ್ಕೆ ಹಪಹಪಿಸುವ ವ್ಯಕ್ತಿಯಾಗುವುದಕ್ಕಿಂತ ಕೆಲಸವೇ ದೇವರೆಂದು ಜನಪರ ಕೆಲಸ ಮಾಡುವ ವ್ಯಕ್ತಿಯಾಬೇಕು ಎಂದು ಬೈಲಕುಪ್ಪೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಿವಯೋಗ ತಿಳಿಸಿದರು.

ಅವರು ಬೈಲಕುಪ್ಪೆ ಗ್ರಾ.ಪಂ. ಕಛೇರಿಯಲ್ಲಿ ಕಳೆದ 18 ವರ್ಷಗಳ ಕಾಲ ಬಿಲ್‌ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ, ಈಗ ಹುಣಸೂರು ತಾಲೂಕಿನ ಹರವೆ ಗ್ರಾಮಕ್ಕೆ ಸರ್ಕಾರಿ ಹುದ್ದೆಗೆ ಬಡ್ತಿ ಪಡೆದುಕೊಂಡು ದ್ವಿತೀಯ ದರ್ಜೆ ಲೆಕ್ಕ ಸಹಾಯಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ರಾಮಚಂದ್ರ ಅವರಿಗೆ ಬೈಲಕುಪ್ಪೆ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮಚಂದ್ರ ಅವರು, ಕೆಲಸದ ಬಗೆಗಿನ ಪ್ರೀತಿ, ನಿಷ್ಠೆ ಹಾಗೂ ಜನರ, ಜನಪ್ರತಿನಿಧಿಗಳ ಮತ್ತು ಪಂಚಾಯಿತಿ ಸಿಬ್ಬಂದಿಗಳ ವಿಶ್ವಾಸವೇ ಬೈಲಕುಪ್ಪೆ ಗ್ರಾಮದಲ್ಲಿ ತಮ್ಮ 18 ವರ್ಷಗಳ ಸೇವಾ ಅವಧಿಯ ಯಶಸ್ವಿ ಕಾರ್ಯಗಳ ಜೀವಾಳವಾಗಿದ್ದು, ಗ್ರಾಮ ಮತ್ತು ಜನತೆಯನ್ನು ತಾವು ಮರೆಯುವುದಿಲ್ಲ ಎಂದು ತಿಳಿಸಿದರು.

ಇದೆ ಸಂದರ್ಭ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಅವರು ಗ್ರಾಪಂ ಸದಸ್ಯ ಮಲ್ಲೇಶ, ಸಿಬ್ಬಂದಿಗಳಾದ ರಾಜು ನಾಯಕ, ಅರ್ಪಿತಾ, ಶ್ವೇತಾ, ವಾಟರ್’ಮ್ಯಾನ್‌ಗಳಾದ ರಾಜಮ್ಮ, ಮಂಜುನಾಥ, ಪೌರಕಾರ್ಮಿಕರಾದ ಮುತ್ತಯ್ಯ, ವಿಜಯ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ವರದಿ: ರಾಜೇಶ್

Leave a Reply

comments

Related Articles

error: