ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಪ್ರೊ. ಲಿಂಗರಾಜ  ಗಾಂಧಿ ಅಧಿಕಾರ ಸ್ವೀಕಾರ

ಮೈಸೂರು,ಫೆ.21:- ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಪ್ರೊ. ಲಿಂಗರಾಜ  ಗಾಂಧಿ ಅವರು ಅಧಿಕಾರ ಸ್ವೀಕರಿಸಿದರು.

ಮೈಸೂರು ವಿವಿಯ ನೂತನ ಕುಲಸಚಿವರನ್ನು  ಕುಲಪತಿ ಪ್ರೊ ಹೇಮಂತ್ ಕುಮಾರ್ ಅಭಿನಂದಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಅವರು,  ಮೈಸೂರು ವಿವಿಗೂ ನನಗೂ ಅವಿನಾಭಾವ ಸಂಬಂಧವಿದೆ. ನನ್ನ ವಿದ್ಯಾರ್ಥಿ ಜೀವನದಿಂದ ಅಧ್ಯಾಪಕ  ವೃತ್ತಿಯವರೆಗೆ 40 ವರ್ಷದ ಒಡನಾಟವಿದೆ. ವಿದ್ಯಾರ್ಥಿ ಯಾಗಿ ಈಗ ಈ ಹುದ್ದೆಗೆ ಏರಿರುವುದು  ಸಂತಸ ತಂದಿದೆ ಎಂದು ಸಂತಸ ಹಂಚಿಕೊಂಡರು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗಮಾಡಿ  ನನ್ನ ವೃತ್ತಿ ಜೀವನವನ್ನು  ಇದೇ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿ ಮತ್ತೆ ಇಲ್ಲಿಗೆ ಕುಲಸಚಿವನಾಗಿದ್ದೇನೆ. ಈ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಆಡಳಿತಾತ್ಮಕವಾಗಿ ವಿಶ್ವವಿದ್ಯಾನಿಲಯವನ್ನು  ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ತರುವ ವಿಶ್ವಾಸವಿದೆ. ಇಂತಹ ಅವಕಾಶಮಾಡಿಕೊಟ್ಟ  ಸರ್ಕಾರಕ್ಕೆ ಧನ್ಯವಾದಗಳು ಎಂದು ಪ್ರೊ. ಲಿಂಗರಾಜಗಾಂಧಿ ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: