ಪ್ರಮುಖ ಸುದ್ದಿ

ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ : ಮೂರು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಕಬ್ಬು ಬೆಂಕಿಗೆ ಆಹುತಿ

ರಾಜ್ಯ(ಮಂಡ್ಯ)ಫೆ.21:- ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಮೂರು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ  ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ಕೆನ್ನಾಳಿನಲ್ಲಿ ನಡೆದಿದೆ.

ಸರ್ವೆ ನಂಬರ್ 555 -556 ಜಮೀನಿನಲ್ಲಿ ಅವಘಡ ಸಂಭವಿಸಿದ್ದು, ಎಚ್ ಎಸ್ ರಾಮೇಗೌಡರ ಮಗ ಯೋಗೇಂದ್ರ ಎಂಬವರಿಗೆ ಸೇರಿದ ಜಮೀನು ಇದಾಗಿದೆ.  ಕಬ್ಬಿನ ಗದ್ದೆಯ ಒಳಗೆ ಹಾದುಹೋಗಿರುವ ವಿದ್ಯುತ್ ಕಂಬದಿಂದ ಬೆಂಕಿ ಬಿದ್ದು ಮೂರು ಲಕ್ಷ ನಷ್ಟವಾಗಿದೆ ಎಂದು ಹಾರೋಹಳ್ಳಿಯ ಗ್ರಾಮದ ಧನ್ಯ ಕುಮಾರ್ ತಿಳಿಸಿದರು. ರೈತ ಘಟನೆಯಿಂದ ಮತ್ತೆ  ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿದು ತಕ್ಷಣ ಬಂದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: