ಪ್ರಮುಖ ಸುದ್ದಿಮನರಂಜನೆ

ಮಕ್ಕಳನ್ನು ಟ್ರೋಲ್ ಮಾಡಿದ್ದಕ್ಕೆ ಗರಂ ಆದ ನಟ ಅಜಯ್ ದೇವಗನ್

ದೇಶ(ನವದೆಹಲಿ)ಫೆ.21:- ಬಾಲಿವುಡ್ ನ ಇತರ ಪ್ರಸಿದ್ಧ ತಾರೆಗಳ ಮಕ್ಕಳಂತೆ ನಟರಾದ ಅಜಯ್ ದೇವಗನ್ ಮತ್ತು ನಟಿ ಕಾಜೋಲ್ ನ ಮಗಳು ನ್ಯಾಸಾ ಮತ್ತು ಪುತ್ರ ಯುಗ್ ಕೂಡ ಮಾಧ್ಯಮದ ಆಕರ್ಷಣೆಯ ಕೇಂದ್ರವಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಟ್ರೋಲ್ ಆಗುತ್ತಿರುತ್ತಾರೆ. ಆದರೆ ನಟ ಅಜಯ್ ದೇವಗನ್ ಈ ಕುರಿತು ಗರಂ ಆಗಿದ್ದಾರೆ. ‘ನಾನು ಮತ್ತು ನನ್ನ ಪತ್ನಿ ಕಾಜೋಲ್ ಕಲಾವಿದರು. ನಮ್ಮನ್ನು ಬೇಕಾದರೆ ಉಲ್ಲೇಖಿಸಿ, ಆದರೆ ನಮ್ಮ ಮಕ್ಕಳನ್ನು ಎಳೆದು ತರಬೇಡಿ. ನಮ್ಮನ್ನು ಜಡ್ಜ್ ಮಾಡಿ, ಆದರೆ ನಮ್ಮ ಮಕ್ಕಳನ್ನಲ್ಲ’ ಎಂದಿದ್ದಾರೆ. ಯಾರೊಬ್ಬರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ನಾನು ಯಾರ ಕುರಿತಾದರೂ ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದರೆ ಖಂಡಿತ ಆ ವ್ಯಕ್ತಿ ಕೆಟ್ಟದಾಗಿಯೇ ಭಾವನೆ ಬೆಳೆಸಿಕೊಳ್ಳುತ್ತಾರೆ. ನನ್ನ ಮಕ್ಕಳೂ ಕೂಡ ಕೆಟ್ಟ ಭಾವನೆ ಬೆಳೆಸಿಕೊಳ್ಳಬಹುದು. ಜವಾಬ್ದಾರಿಯುತವಾಗಿ ಹೇಳಬೇಕೆಂದರೆ ಕೆಲವರು  ವಾಸ್ತವದಲ್ಲಿ ಅದನ್ನು ಕಡೆಗಣಿಸುತ್ತಾರೆ. ಆದರೆ ಕೆಲವೊಮ್ಮೆ ಕೆಟ್ಟದಾಗಿ ಬಿಂಬಿಸಲಾಗುತ್ತದೆ. ನನ್ನ ಮಕ್ಕಳನ್ನು ಕೆಟ್ಟರೀತಿಯಲ್ಲಿ ಟ್ರೋಲ್ ಮಾಡಲಾಗಿದೆ. ನ್ಯಾಸಾ ಧರಿಸಿದ ಡ್ರೆಸ್ ಕುರಿತು ಟ್ರೋಲ್ ಮಾಡಲಾಗಿದೆ ಎಂದು ಗರಂ ಆಗಿದ್ದಾರೆ. ಮುಂಚೆ ಟ್ರೋಲ್ ಮಾಡಿದಾಗ ಅಸಮಾಧಾನಗೊಳ್ಳುತ್ತಿದ್ದಳು. ಆದರೆ ಈಗ ಅದನ್ನು ನಿರ್ಲಕ್ಷ್ಯಿಸುತ್ತಾಳೆ. ಕೆಲವರು ಅನಗತ್ಯವಾಗಿ ನಮ್ಮನ್ನು ಜಡ್ಜ್ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: