ಪ್ರಮುಖ ಸುದ್ದಿಮೈಸೂರು

ಆಪರೇಷನ್ ಚಾಮುಂಡಿಗೆ ಚಾಲನೆ

ಮೈಸೂರು ನಗರ ಪೊಲೀಸರು ಚಾಮುಂಡಿ ಬೆಟ್ಟದ ಪ್ರದೇಶದಲ್ಲಿ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಆಪರೇಷನ್ ಚಾಮುಂಡಿಗೆ ಮರು ಚಾಲನೆ ನೀಡಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದೆ ಯುವ ಜೋಡಿಗಳು ಪ್ರವಾಸಿಗರಿಗೆ ಮುಜುಗರ ಉಂಟಾಗುವ ನಡವಳಿಕೆ ತೋರುತ್ತಿದ್ದರು. ಇಲ್ಲಿ ಸರಗಳ್ಳತನಗಳು ನಡೆಯುತ್ತಿವೆ ಎಂದು ಸಾರ್ನಜನಿಕರಿಂದ ದೂರುಗಳು ದಾಖಲಾಗುತ್ತಿದ್ದುದರಿಂದ ಆಪರೇಷನ್ ಚಾಮುಂಡಿಯನ್ನು ಆರಂಭಿಸಲಾಗಿತ್ತು.

ಆಪರೇಷನ್ ಸ್ಥಗಿತವಾದ ಹಲವು ವರ್ಷಗಳ ಬಳಿಕ ಕೃಷ್ಣರಾಜ ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ನೇತೃತ್ವದ ಪ್ರೊಬೆಷನರಿ ಪೊಲೀಸರನ್ನೊಳಗೊಂಡ ತಂಡ ಆಪರೇಷನ್ ಚಾಮುಂಡಿಗೆ ಮರು ಚಾಲನೆ ನೀಡಿದೆ. ಬೆಟ್ಟದ ಸುತ್ತಲೂ ಗಸ್ತು ನಡೆಸಿದ ತಂಡ ವಾಹನಗಳನ್ನು ನಿಲ್ಲಿಸಿ, ದಾಖಲೆಗಳನ್ನು ಪರಿಶೀಲಿಸಿ ಬೆಟ್ಟಕ್ಕೆ ಆಗಮಿಸುತ್ತಿರುವ ಕಾರಣದ ಕುರಿತು ವಿಚಾರಿಸಿದರು. ಈ ಮೂಲಕ ಬೆಟ್ಟದಲ್ಲಿ ಯಾವುದೇ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯಲು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Leave a Reply

comments

Related Articles

error: