
ಪ್ರಮುಖ ಸುದ್ದಿಮೈಸೂರು
ಫೆ.24ರಂದು ಕವನ ಸಂಕಲನ -ಕಾದಂಬರಿ ಬಿಡುಗಡೆ
ಮೈಸೂರು,ಫೆ.20 : ಭಾರತ ಕನ್ನಡ ಪರಿಷತ್ತು, ಯುಕ್ತ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಕಾದಂಬರಿ ಹಾಗೂ ಕವನ ಸಂಕಲನಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆ.24ರಂದು ಬೆಳಗ್ಗೆ 10 ಗಂಟೆಗೆ ಶಾರದ ವಿಲಾಸ ಕಾನೂನು ಕಾಲೇಜಿನ ವೆಂಕಟಕೃಷ್ಣಯ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ರಾಘವೇಂದ್ರಕುಮಾರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಎಂ.ಎಸ್.ರಾಚಪ್ಪನವರ ‘ಸಾರಥಿಯ ಅಂತರಾಳ’ ಆರ್.ರಂಗಸ್ವಾಮಿಯವರ ‘ಮನದ ಕನ್ನಡಿ’ ಪಿ.ಎನ್.ಬಸವರಾಜ್ ಅವರ ಕನಸಿನ ಕುಸುಮ ಹಾಗೂ ರಾಮಣ್ಣ ತಟ್ಟಿಯವರ ಜನನಿ ಜನ್ಮಭೂಮಿ ಕಾದಂಬರಿಯನ್ನು ಸಾಹಿತಿ ಡಾ.ಕೆ.ಆರ್.ಪ್ರೇಮಲೀಲಾ ಬಿಡುಗಡೆಗೊಳಿಸುವರು, ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಧ್ಯಕ್ಷತೆ ವಹಿಸುವರು. ಕವಿಯತ್ರಿ ಡಾ.ಲತಾರಾಜಶೇಖರ್ ಉದ್ಘಾಟಿಸುವರು ಎಂದು ಹೇಳಿದರು.
ಕೃತಿಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ ಮ.ಗು.ಸದಾನಂದಯ್ಯ ಹಾಗೂ ಹಿರಿಯ ಸಾಹಿತಿ ಸಿ.ಇ.ಜ್ಞಾನೇಶ್ ಕುಮಾರ್ ಮಾತನಾಡುವರು, ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹಾಗೂ ಪ್ರಕಾಶಕ ಕೆ.ಸಿ.ಓಂಕಾರಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಉಪಸ್ಥಿತರಿರುವರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಮಾತನಾಡಿ, ಸಾಹಿತ್ಯ ವಿದ್ಯಾರ್ಥಿಗಳೇ ಸಾಹಿತ್ಯ ಕೃಷಿ ಮಾಡುತ್ತಿದ್ದು ಇತರರು ಈ ಕ್ಷೇತ್ರಕ್ಕೆ ಬರಬೇಕಾಗಿದೆ ಎಂದು ಆಶಿಸಿ, ಈ ನಾಲ್ಕು ಜನ ಉದಯೋನ್ಮುಖ ಕವಿಗಳು ಒಂದೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಹಿತ್ಯ ರಚಿಸಲಿ ಎಂದು ಕರೆ ನೀಡಿದರು.
ಪ್ರಕಾಶಕ ಓಂಕಾರಪ್ಪ, ಕವಿಗಳಾದ ಎಂ.ಎಸ್.ರಾಚಪ್ಪ, ಆರ್.ರಂಗಸ್ವಾಮಿ, ಸಾಹಿತಿ ಪ್ರೊ.ನಿ.ಗಿರಿಗೌಡ, ನಾಗರತ್ನಮ್ಮ ಇನ್ನಿತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)