ಪ್ರಮುಖ ಸುದ್ದಿಮೈಸೂರು

ಮೈಸೂರು ಮಾರ್ಕೆಟ್ ನಿಂದ ಫೆ.24ರಂದು ‘ಸಂತೆ,ಊಟ, ಮಜಾ’

ಮೈಸೂರು,ಫೆ.21 : ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮೈಸೂರು ಮಾರ್ಕೆಟ್ ವತಿಯಿಂದ ವಿಭಿನ್ನವಾದ ‘ಸಂತೆ, ಊಟ, ಮಜಾ’ ಕಾರ್ಯಕ್ರಮವನ್ನು ಫೆ.24ರಂದು ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್.ಸಚಿನ್ ತಿಳಿಸಿದರು.

ಅಂದು ಬೆಳಗ್ಗೆ 11 ಗಂಟೆಗೆ ಅರ್ಪಿತಾ ಪ್ರತಾಪ್ ಸಿಂಹ ಚಾಲನೆ ನೀಡುವರು, ಮೈಸೂರು ಪ್ರವಾಸೋದ್ಯಮ ಉಪನಿರ್ದೇಶಕ ಹೆಚ್.ಜನಾರ್ಧನ್ ಮುಖ್ಯ ಅತಿಥಿಯಾಗಿದ್ದಾರೆ. ಸಂತೆಯಲ್ಲಿ ಲಕ್ನೋ, ಚೆನೈ, ದೆಹಲಿ ಮುಂಬಯಿ, ಹೈದ್ರಾಬಾದ್ ನ ವಿವಿಧ ಬ್ರಾಂಡ್ ಗಳು ಸುಮಾರು 90ಕ್ಕೂ ಹೆಚ್ಚು ಮಳಿಗೆಗಳು ಪಾಲ್ಗೊಳ್ಳುತ್ತಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಲಿಗೆ ರುಚಿ ಕೆರಳಿಸುವ ವಿವಿಧ ಪ್ರಾಂತಿ ವಿಶಿಷ್ಟ ತಿನಿಸುಗಳು, ಆರೋಗ್ಯಕರ ಆಹಾರ, ಪಾಕ ಪದ್ಧತಿಗಳ ಪರಿಚಯ, ಆರೋಗ್ಯ ಸೌಂದರ್ಯ, ಮನೆಯ ಅಲಂಕಾರಿಕ ವಸ್ತುಗಳು, ನವೀನ ರೀತಿಯ ವಸ್ತ್ರಾಭರಣಗಳು, ಸುಂದರ ಉಡುಪಗಳು, ಡಿಜೆ, ಮಕ್ಕಳಿಗೆ ವಿಶೇಷವಾದ ಆಟದ ಮೈದಾನವನ್ನು ತಯಾರಿಸಲಾಗಿದೆ, ಇದರೊಂದಿಗೆ ಸಾಕು ಪ್ರಾಣಿಗಳಿಗೂ ವಿಶೇಷ ಮಳಿಗೆಗಳನ್ನು ಮೊದಲಬಾರಿಗೆ ಪರಿಚಯಿಸಲಾಗುತ್ತಿದೆ, ಭಾನುವಾರದ ರಜೆಯನ್ನು ಕಳೆಯಲು ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು ರಾತ್ರಿ 11ರವರೆಗೆ ಈ ಸಂತೆ ನಡೆಯಲಿದೆ. ನೂರು ರೂ. ಹಿರಿಯ ನಾಗರೀಕರಿಗೆ ಉಚಿತ ಪ್ರವೇಶ ಎಂದು ತಿಳಿಸಿದರು.

ಮೈಸೂರು ಮಾರ್ಕೆಟ್ ಆಯೋಜಕಿ ನಿಧಿ ಶಾ, ಭಾಗ್ಯಲಕ್ಷ್ಮಿ ಫುಡ್ ನ ಗಿರೀಶ್, ಕಿಡ್ಸ್ ಅಕಾಡೆಮಿಯ ಮನೀಶ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: