ಮೈಸೂರು

ಕುಂಚಿಟಿಗ ಸಮಾಜದ ಸದಸ್ಯರಿಗೆ ಅರಿವು

ಕುಂಚಿಟಿಗರ ಸಂಘಟನಾ ಸಭಾ ಹಾಗೂ ಅಖಿಲ ಕುಂಚಿಟಿಗರ ಮಹಾಮಂಡಲ ಬೆಂಗಳೂರು ಇವರ ಸಹಯೋಗದಲ್ಲಿ ಸಮಾಜದ ಸಂಘಟನೆ ಹಾಗೂ ಸದಸ್ಯರಿಗೆ ಅರಿವು ಮೂಡಿಸುವ ಸಲುವಾಗಿ ಸಭೆಯನ್ನು ಕರೆಯಲಾಗಿದೆ.

ಆಗಸ್ಟ್ 28ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಕುಂಚಿಟಿಗರ ಸಂಘ ಆಲಮ್ಮನವರ ಛತ್ರದ ವಿದ್ಯಾರ್ಥಿ ನಿಲಯದ ಪ್ರಾರ್ಥನಾ ಮಂದಿರದಲ್ಲಿ ಸಭೆ ಜರುಗಲಿದೆ.

ಸಮಾಜದ ಸಂಘಟನೆ ಹಾಗೂ ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನದ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸುವುದಲ್ಲದೇ ಈಗಾಗಲೇ ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮಾನವ ಕುಲಶಾಸ್ತ್ರ ಅಧ್ಯಯನಕ್ಕೆ ಅಧಿಕಾರಿಯನ್ನು ನೇಮಕ ಮಾಡಿದ್ದು ಅವರಿಗೆ ಸೂಕ್ತ ಮಾಹಿತಿ ನೀಡುವ ಬಗ್ಗೆ ಅರಿವು ಮೂಡಿಸುವುದು ಸಭೆಯ ಉದ್ದೇಶವಾಗಿದೆ.

ಸಭೆಯಲ್ಲಿ ಮೈಸೂರು ನಗರ ಸೇರಿದಂತೆ ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಸಂಘ ಸಂಸ್ಥೆಗಳ ಸದಸ್ಯರುಗಳು ಹಾಗೂ ಜನಾಂಗದವರು ಪಾಲ್ಗೊಳ್ಳುತ್ತಿದ್ದು, ಸಮಾಜದ ಸುಧಾರಣೆಗೆ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅಧ್ಯಕ್ಷ ಎನ್.ವಿಶ್ವನಾಥ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

comments

Related Articles

error: