ಮೈಸೂರು

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇವಿಎಂ, ವಿವಿ ಪ್ಯಾಟ್ ಗಳ ಬಗ್ಗೆ ಅರಿವು

ಮೈಸೂರು,ಫೆ.22:- ಮೈಸೂರಿನ ಪಡುವರಹಳ್ಳಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಇವಿಎಂ, ವಿವಿ ಪ್ಯಾಟ್ ಗಳ ಬಗ್ಗೆ ಅರಿವು ಏರ್ಪಡಿಸಲಾಗಿತ್ತು.

ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಜಿಲ್ಲಾ ಪಂಚಾಯತ್, ಚುನಾವಣಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮತದಾನ ಕುರಿತು ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಮತ ಚಲಾಯಿಸೋದು ಹೇಗೆ, ನೋಂದಣಿ ಮಾಡಿಸೋದು ಹೇಗೆ ಎಂಬುದನ್ನು ಅಧಿಕಾರಿಗಳು ಕಾಲೇಜು ಆವರಣದಲ್ಲಿ ಇವಿಎಂ,ವಿವಿ ಪ್ಯಾಡ್ ಗಳನ್ನು ಇರಿಸಿ ನೇರವಾಗಿ ಮತ ಚಲಾಯಿಸುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ಸಂದರ್ಭ ಸ್ವೀಪ್ ಕಾರ್ಯದರ್ಶಿ ಕೃಷ್ಣ ಮಾತನಾಡಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇವಿಎಂ ಯಂತ್ರದ ಮೂಲಕ ಮತದಾನ ಮಾಡೋದು ಹೇಗೆ ಮತದಾನ ಪ್ರಕ್ರಿಯೆ ಹೇಗಿರುತ್ತದೆ ಎಂಬ ಅರಿವು ಕಾರ್ಯಕ್ರಮ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳಿಗೆ ಅರ್ಹ ಅಭ್ಯರ್ಥಿಗೆ ನಿಮ್ಮ ಅಮೂಲ್ಯ ಮತ ಹಾಕಿ. ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಿ ಎಂದು ಮನವಿ ಮಾಡಿದ್ದೇವೆ. 18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಉತ್ಸುಕರಾಗಿ ನೋಂದಣೆ ಮಾಡಿಕೊಳ್ಳುತ್ತಿದ್ದಾರೆ ಎಂದರಲ್ಲದೇ,ಇದೇ ಫೆಬ್ರವರಿ  23 ,24 ರಂದು ಹಾಗೂ ಮಾರ್ಚ್ 2,3 ರಂದು ಮಿಂಚಿನ ನೊಂದಣಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.  ಇದೇ ಸಂದರ್ಭ ಜಿಲ್ಲಾ ಸಮನ್ವ ಅಧಿಕಾರಿ ಪ್ರವೀಣ್ ,ಜಿಲ್ಲಾ ನೋಡಲ್ ಆಫೀಸರ್, ಡಾ.ಬಿಕೆ ಕೆಂಪೇಗೌಡ, ವೆಂಕಟರಾವ್ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: