
ವಿಜಯಪುರ (ಫೆ.21): ನಿನ್ನೆ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ ಸಿಆರ್ ಪಿಎಫ್ ಯೋಧ ಚಿದಾನಂದ ದೇವಪ್ಪ ಭಜಂತ್ರಿ ಅಂತ್ಯಕ್ರಿಯೆ ಇಂದು ನಡೆಯಿತು. ಸಿಂದಗಿ ತಾಲೂಕಿನ ಕೊನ್ನೊಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹುತಾತ್ಮ ಯೋಧನ ಅಂತ್ಯಕ್ರಿಯೆಯಲ್ಲಿ ಬಿಜೆಪಿ ಶಾಸಕ ಎಂ.ಎನ್ ಪಾಟೀಲ್ ನಡಹಳ್ಳಿ, ಕೇಂದ್ರ ಸಚಿವ ರಮೇಶ್ ಜಿಗಜಿಗಣಗಿ ಅವರು ಹಾಜರಿದ್ದು ನಮನ ಸಲ್ಲಿಸಿದರು. (ಎನ್.ಬಿ)