ಕರ್ನಾಟಕಪ್ರಮುಖ ಸುದ್ದಿ

ನಿಧಿ ಆಸೆಗೆ ಸ್ವಂತ ಅಜ್ಜಿಯನ್ನೇ ಬಲಿ ಕೊಟ್ಟ ಮೊಮ್ಮಗ!

ಶಿರಸಿ (ಫೆ.22): ಮೊಮ್ಮಗನೊಬ್ಬ ನಿಧಿಯ ಮೇಲಿನ ಆಸೆಯಿಂದ ಸ್ವಂತ ಅಜ್ಜಿಯನ್ನೇ ದೇವರಿಗೆ ಬಲಿ ನೀಡುವ ನೆಪದಲ್ಲಿ ಕೊಲೆ ಮಾಡಿದ ಘಟನೆ ಶಿರಸಿಯ ಬದನಗೋಡ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಗೊಲ್ಲರ್ (75) ಮೊಮ್ಮಗನಿಂದ ಕೊಲೆಯಾದ ಅಜ್ಜಿ.

ರಮೇಶ್ ಗೊಲ್ಲರ್ ಕೊಲೆ ಮಾಡಿದ ಆರೋಪಿ. ಈತನಿಗೆ ಕನಸಿನಲ್ಲಿ ಹುಲಿಯಮ್ಮ ದೇವರು ಬಂದು ನಿನಗೆ ನಿಧಿ ಸಿಗುತ್ತದೆ ಅದಕ್ಕಾಗಿ ನೀನು ಐದು ನರಬಲಿ ಕೊಡಬೇಕು ಎಂಬುದಾಗಿ ಹೇಳಿತ್ತಂತೆ. ಅದಕ್ಕಾಗಿ ಈತ ಈ ಹಿಂದೆ ಮಳಗಿ ಡ್ಯಾಮ್ ಬಳಿ ಬಾಲಕನೋರ್ವವನನ್ನು ಕೊಲೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಆದರೆ ಇದೀಗ ಜಾಮೀನಿನ ಮೂಲಕ ಹೊರ ಬಂದಿದ್ದ ರಮೇಶ್ ಗೊಲ್ಲರ್ ನಿಧಿಯ ಆಸೆಗೆ ಎರಡನೇ ಬಲಿಯಾಗಿ ತನ್ನ ಅಜ್ಜಿಯ ಕುತ್ತಿಗೆ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: