
ಕರ್ನಾಟಕಪ್ರಮುಖ ಸುದ್ದಿ
ಹೋ..! ನೀವು ಕನ್ನಡಿಗರು ಅನ್ನೋದು ನೆನಪಿದೆಯಲ್ವಾ? ರಮ್ಯಾಗೆ ನೆಟ್ಟಿಗರ ಟಾಂಗ್!
ಬೆಂಗಳೂರು (ಫೆ.22): ಮಾತೃಭಾಷಾ ದಿನದ ಪ್ರಯುಕ್ತ ಟ್ವಿಟರ್ನಲ್ಲಿ ಕನ್ನಡದ ಬಗ್ಗೆ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದಕ್ಕೆ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಟ್ರೋಲ್ಗೊಳಗಾಗಿದ್ದಾರೆ.
ಕನ್ನಡೇತರ ಮಂದಿ ಕರ್ನಾಟಕ ಮತ್ತು ಕನ್ನಡ ಎಂಬ ಶಬ್ಧವನ್ನು ಹೇಗೆ ತಪ್ಪಾಗಿ ಉಚ್ಛರಿಸುತ್ತಾರೆ ಎಂದು ರಮ್ಯಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ವಿವರಣೆ ನೀಡಿದ್ದರು. ಇದನ್ನು ನೋಡಿ ಟ್ವಿಟರಿಗರು ಕನ್ನಡದ ಬಗ್ಗೆಯಾದರೂ ಕನ್ನಡದಲ್ಲೇ ಟೈಪ್ ಮಾಡಿ ಎಂದಿದ್ದಾರೆ. ಮತ್ತೆ ಕೆಲವರು ಸದ್ಯ, ನಿಮಗೆ ನೀವು ಕನ್ನಡದವರು ಎಂಬುದು ನೆನಪಿದೆಯಲ್ಲಾ ಎಂದು ಕಾಲೆಳೆದಿದ್ದಾರೆ!
ಇನ್ನು ಕೆಲವರು ಮೊದಲು ರಾಹುಲ್ ಗಾಂಧಿಗೆ ವಿಶ್ವೇಶ್ವರಯ್ಯ ಎಂದು ಹೇಗೆ ಸರಿಯಾಗಿ ಉಚ್ಛರಿಸಬೇಕು ಎಂದು ಕಲಿಸಿಕೊಡಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಂತೂ ಇತ್ತೀಚೆಗೆ ರಮ್ಯಾ ಏನೇ ಟ್ವೀಟ್ ಮಾಡಿದರೂ ಟ್ರೋಲ್ ಗೊಳಗಾಗುವುದು ಮಾತ್ರ ತಪ್ಪುವುದಿಲ್ಲ. (ಎನ್.ಬಿ)