ಮೈಸೂರು

ಫೆಬ್ರವರಿ 5 ರಿಂದ 22 ರವರೆಗೆ ಆಹಾರ ಮೇಳ

ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಫೆ.5 ರಿಂದ 22 ರವರೆಗೆ 15 ದಿನಗಳ ಕಾಲ ಆಹಾರ ಮೇಳ ನಡೆಯಲಿದೆ. ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದ ವಿವಿಧ ಭಾಗಗಳ ಸಸ್ಯಾಹಾರ ಮತ್ತು ಮಾಂಸಾಹಾರ ತಿಂಡಿ ತಿನಿಸುಗಳ ಮಾರಾಟ ನಡೆಯಲಿದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ‍್ಯಕ್ಷ ಸಿದ್ದರಾಜು ತಿಳಿಸಿದರು.

ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 10 ರಿಂದ ಮೇ 25 ರವರೆಗೆ ಬೇಸಿಗೆ ಮೇಳ ನಡೆಯಲಿದ್ದು, ದಸರಾ ವಸ್ತು ಪ್ರದರ್ಶನದ ರೀತಿಯಲ್ಲಿಯೇ ಜನರನ್ನು ಆಕರ್ಷಿಸಲಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳು 2016 ರ ರಾಜ್ಯ ಬಜೆಟ್ ನಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾ‍ಧಿಕಾರವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಖಾಯಂ ವಸ್ತುಪ್ರದರ್ಶನದ ಕೇಂದ್ರವನ್ನಾಗಿ ಘೋಷಿಸಿರುವುದರಿಂದ ಪ್ರಾಧಿಕಾರದ ಚಟುವಟಿಕೆಗಳು ವರ್ಷಪೂರ್ತಿ ನಡೆಯುವಂತಾಗಲು ಶಾಶ್ವತವಾದ ಕಾರ್ಯಗಳನ್ನು ಪ್ರಾಧಿಕಾರ ಹಮ್ಮಿಕೊಳ್ಳುತ್ತಿದೆ. 80 ಎಕರೆ ಜಾಗದಲ್ಲಿ ಸಮಗ್ರ ಅಭಿವೃದ್ದಿ ಯೋಜನೆ ಸಿದ್ದಪಡಿಸಿ ಅದರಂತೆ ಎಕ್ಸಿಬಿಷನ್ ಸೆಂಟರ್, ಸಭೆ ಸಮಾರಂಭಗಳನ್ನು ನಡೆಸಲು ಕನ್ವೆನ್ಶನ್ ಸೆಂಟರ್, ಮೀಟಿಂಗ್ ಮತ್ತು ಸೆಮಿನಾರ್ ಹಾಲ್, ಶಾಶ್ವತವಾದ ಅಮ್ಯೂಸ್ಮೆಂಟ್ ಪಾರ್ಕ್, ಕಿಡ್ ಝೋನ್, ಫುಡ್ ಕೋರ್ಟ್, ಸ್ನೋ ವರ್ಲ್ಡ್ ಹಾಗೂ ಎಂ.ಜಿ.ರಸ್ತೆ ಕಡೆಯಿಂದ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

Leave a Reply

comments

Related Articles

error: