ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್

ಬೆಂಗಳೂರು,ಫೆ.22-ನಟಿ ನೇಹಾ ಪಾಟೀಲ್, ಪ್ರಣಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿಜಯನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು.

ಮನೆಯವರು ನೋಡಿ ನಿಶ್ಚಯಿಸಿದ ಹುಡುಗನೊಂದಿಗೆ ನೇಹಾ ಸಪ್ತಪದಿ ತುಳಿದಿದ್ದಾರೆ. ಎರಡು ಕುಟುಂಬದ ಸಂಬಂಧಿಕರು, ಆಪ್ತರು ಮದುವೆಗೆ ಸಾಕ್ಷಿಯಾಗಿ ನೂತನ ವಧುವರರಿಗೆ ಶುಭ ಹಾರೈಸಿದರು.

ಆರತಕ್ಷತೆಯಲ್ಲಿ ‘ಗರ’ ಚಿತ್ರತಂಡದ ನಿರ್ದೇಶಕ ಮುರಳಿಕೃಷ್ಣ ಸೇರಿದಂತೆ ಕಲಾವಿದ, ನಿರೂಪಕ ರೆಹಮಾನ್, ನಟಿ‌ ಶರಣ್ಯಾ ದಂಪತಿ ಮತ್ತಿತರರು ಹಾಜರಿದ್ದರು.

ಆದರೆ ಆರಂಭದಿಂದ ಕೊನೆಯ ತನಕ ಜೊತೆಗಿದ್ದು ಸಂಭ್ರಮಿಸಿದವರಲ್ಲಿ ನೇಹಾರ ಸ್ನೇಹಿತೆ ದೀಪಿಕಾ ದಾಸ್ ಕೂಡ ಒಬ್ಬರು. ಮದುಮಗಳ ಜೊತೆಗೆ ಸಂಭ್ರಮದ ಹೆಜ್ಜೆ ಹಾಕಿದ ದೀಪಿಕಾ ದಾಸ್ ತಮ್ಮ ಖುಷಿಯನ್ನು ಹಂಚಿಕೊಂಡರು.

2011ರಲ್ಲಿ ಚಿತ್ರರಂಗ ಪ್ರವೇಶಿಸಿದ ನೇಹಾ ಪಾಟೀಲ್ ತಿಪ್ಪಜ್ಜಿ ಸರ್ಕಲ್, ಸಿತಾರ, ಪಾರು ವೈಫ್ ಆಫ್ ದೇವದಾಸ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: