ಕ್ರೀಡೆ

ಐಪಿಎಲ್ ಹಾರ್ದಿಕ್ ಪಾಂಡ್ಯ ಆಡುವುದು ಅನುಮಾನ

ನವದೆಹಲಿ,ಫೆ.22-ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಅಲಭ್ಯವಾಗುವ ಅನುಮಾನ ಕಾಡಿದೆ.

ಗಾಯದ ಸಮಸ್ಯೆಯಿಂದಾಗಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿರುವ ಪಾಂಡ್ಯ ಐಪಿಎಲ್ ಗೂ ಅಲಭ್ಯವಾಗಲಿದ್ದಾರೆ ಎಂಬ ಅನುಮಾನವಿದೆ. ಆಸೀಸ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ರವೀಂದ್ರ ಜಡೇಜಾ ತಂಡ ಸೇರಿಕೊಂಡಿದ್ದಾರೆ.

ಮುಂಬರುವ ಏಕದಿನ ವಿಶ್ವಕಪ್‌ಗಾಗಿನ ಟೀಮ್ ಇಂಡಿಯಾದಲ್ಲಿ ಪಾಂಡ್ಯ ಅವಿಭಾಜ್ಯ ಅಂಗವಾಗಿರುವ ಹಿನ್ನಲೆಯಲ್ಲಿ ವೈದ್ಯರ ಸಲಹೆಯಂತೆ ವಿಶ್ರಾಂತಿಯನ್ನು ಸೂಚಿಸಲಾಗಿದೆ.

ಐಪಿಎಲ್‌ನಲ್ಲಿ ಭಾಗವಹಿಸುವುದರ ಬಗ್ಗೆ ಖಚಿತತೆಯಿಲ್ಲ. ಪಾಂಡ್ಯ ಇದೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಮೂರು ವಾರಗಳ ಪುನಶ್ಚೇತನ ಶಿಬಿರದಲ್ಲಿ ಭಾಗವವಹಿಸಲಿದ್ದಾರೆ. ತದಾ ಬಳಿಕವಷ್ಟೇ ಐಪಿಎಲ್ ಪಾಲ್ಗೊಳ್ಳುವುದರ ಬಗ್ಗೆ ಸ್ಪಷ್ಟ ಸೂಚನೆ ಹೊರಬರಲಿದೆ.

ಅಂದ ಹಾಗೆ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಪಾಂಡ್ಯ ಪ್ರತಿನಿಧಿಸುತ್ತಿದ್ದಾರೆ. ಪಾಂಡ್ಯ ಅಲಭ್ಯವಾದರೆ ಮುಂಬೈಗೂ ದೊಡ್ಡ ಹಿನ್ನಡೆಯಾಗಲಿದೆ.

2018ರಲ್ಲಿ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಗಾಯಗೊಂಡಿದ್ದರು. ಬಳಿಕ ದೀರ್ಘ ಸಮಯದ ವಿಶ್ರಾಂತಿಯಲ್ಲಿದ್ದ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧ ತಂಡವನ್ನು ಸೇರಿಕೊಂಡರೂ ಕಾಫಿ ವಿತ್ ಕರಣ್ ಟೆವಿಲಿಷನ್ ರಿಯಾಲಿಟಿ ಶೋ ವಿವಾದದಿಂದಾಗಿ ನಿಷೇಧಕ್ಕೊಳಗಾಗಿದ್ದರು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹಿನ್ನಲೆಯಲ್ಲಿ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಭಾಗವಹಿಸಿದ್ದರು. (ಎಂ.ಎನ್)

Leave a Reply

comments

Related Articles

error: