ಮೈಸೂರು

ಆಡಳಿತದಲ್ಲಿನ ಪಾರದರ್ಶಕತೆಗಾಗಿ ಕಾಗದ ರಹಿತ ಕಚೇರಿ ವ್ಯವಸ್ಥೆಗೆ ಚಾಲನೆ

ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶದ ಅಡಿಯಲ್ಲಿ ಕಂದಾಯ ಇಲಾಖೆಯಲ್ಲಿ ಆಡಳಿತವನ್ನು ಪಾರದರ್ಶಕವಾಗಿಸಲು ಹಾಗೂ ಸರಳೀಕರಣಗೊಳಿಸಲು ರಾಜ್ಯದ 15ಜಿಲ್ಲಾಧಿಕಾರಿಗಳ 25ಉಪವಿಭಾಗಾಧಿಕಾರಿಗಳ ಮತ್ತು 25ತಾಲೂಕುಗಳ ಕಚೇರಿಗಳಲ್ಲಿ ಕಾಗದ ರಹಿತ  ಕಚೇರಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಆದೇಶ ಹೊರಡಿಸಿದ್ದು ಶುಕ್ರವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಚಾಲನೆ ನೀಡಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಲ್ಯಾಪ್ ಟಾಪ್ ನಲ್ಲಿ ಬಟನ್ ಒತ್ತುವ ಮೂಲಕ ಕಾಗದ ರಹಿತ ಕಚೇರಿ ವ್ಯವಸ್ಥೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಆಡಳಿತದಲ್ಲಿ ಪಾರದರ್ಶಕತೆ ತರಬೇಕೆನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಇದರಿಂದ ಉಪಯೋಗವಾಗಲಿದೆ  ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಡಿ.ರಂದೀಪ್, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಕಂದಾಯ ಅಧಿಕಾರಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಇದರ ಲಾಭವೇನೆಂದರೆ ಇ-ಕಚೇರಿ ತಂತ್ರಾಂಶದಲ್ಲಿ ಪತ್ರಗಳು ಮತ್ತು ಕಡತಗಳನ್ನು ಸುಲಭವಾಗಿ ಹುಡುಕಬಹುದು. ಕ್ಷಣಮಾತ್ರದಲ್ಲಿ ಗಣಕಯಂತ್ರದ ಮೂಲಕ ಪತ್ರಗಳು ಮತ್ತು ಕಡತಗಳ ಚಲನವಲನಗಳನ್ನು ತಿಳಿದುಕೊಳ್ಳಬಹುದು. ಕಡತಗಳು ಮತ್ತು ಕಚೇರಿ ಪತ್ರಗಳು ಕಳೆದುಹೋಗುವ ಅವಕಾಶವಿರುವುದಿಲ್ಲ. ಸಂಪೂರ್ಣ ಕಾಗದ ರಹಿತ ಕಚೇರಿಯಾಗಿರುವುದರಿಂದ ಕಚೇರಿಯಲ್ಲಿ ಪತ್ರಗಳು ಮತ್ತು ಕಡತಗಳ ಕಾರ್ಡ್ ಕಾಫಿಯನ್ನು ನಿರ್ವಹಿಸುವ ಅವುಗಳ ಮುಂದುವರಿದ ಭಾಗಗಳನ್ನು ನಿರ್ವಹಿಸುವ, ಸಂರಕ್ಷಿಸುವ ಅಗತ್ಯವಿರುವುದಿಲ್ಲ. ಯೂನಿಕೋಡ್ ಮೂಲಕ ತಂತ್ರಾಂಶವನ್ನು ಕನ್ನಡದಲ್ಲಿ ಬಳಸುವ ಅವಕಾಶ ಕಲ್ಪಿಸಲಾಗಿದೆ. ಇ-ಮೇಲ್ ಮತ್ತು ಎಸ್.ಎಂಎಸ್ ಅಲರ್ಟ್ ಗಳನ್ನು ತಂತ್ರಾಂಶದಲ್ಲಿ ಬಳಸಲು ಅವಕಾಶ ಕಲ್ಪಿಸಲಾಗಿದೆ.

Leave a Reply

comments

Related Articles

error: