ಮೈಸೂರು

ತೀರ್ಪಿನ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಒತ್ತಾಯ

ಮೈಸೂರು,ಫೆ.22 : ಗಿರಿಜನರನ್ನು ಕಾಡಿನಿಂದ ಹೊರಹಾಕಲು ನೀಡಿರುವ ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

ಈ ತೀರ್ಪಿನ ಕುರಿತು ಕೇಂದ್ರ ಹಾಗು ಸಂಬಂಧಪಟ್ಟ ಎಲ್ಲಾ ರಾಜ್ಯಗಳು ಸುಪ್ರಿಂಕೋರ್ಟಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಮೂಲನಿವಾಸಿಗಳು ಕಾಡಿನಲ್ಲೆ ಉಳಿಸಲು ಮಾಡಬೇಕಾದ ಕ್ರಮಗಳನ್ನು ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಮೂಲ ನಿವಾಸಿಗಳಿಗೆ ಅರಣ್ಯದಲ್ಲಿ ವಾಸಿಸುವ ಹಕ್ಕುನ್ನು ಉಳಿಸಲು ಸರ್ಕಾರಗಳು ಬದ್ಧತೆಯಿಂದ ನಡೆದುಕೊಳ್ಳದೇ ಇರುವುದು ಸುಪ್ರಿಂಕೋರ್ಟಿನ ತೀರ್ಪು ವ್ಯತಿರಿಕ್ತವಾಗಿ ಬರಲು ಕಾರಣವಾಗಿದೆ. ಆದ್ದರಿಂದ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವೇ ಮೂಲ ನಿವಾಸಿಗಳ ಹಕ್ಕಿನ ಹೋರಾಟವನ್ನು ಸಂಘ ಬೆಂಬಲಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: