ಮೈಸೂರು

ಸಾವಿತ್ರಿ ಬಾಯಿ ಫುಲೆ ಜಯಂತಿ : ಸನ್ಮಾನ ನಾಳೆ

ಮೈಸೂರು,ಫೆ.22 : ಲಯನ್ ಸಿದ್ಧಾರ್ಥ ಟ್ರಸ್ಟ್ ವತಿಯಿಂದ ಮಹಾತ್ಮ ಜ್ಯೋತಿ ಬಾ ಫುಲೆ ಸಾವಿತ್ರಿ ಬಾಯಿ ಫುಲೆ ರವರ ಜಯಂತಿ ಅಂಗವಾಗಿ ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಕುರಿತ ವಿಚಾರ ಸಂಕಿರಣ ಹಾಗೂ ಸಮಾಜ ಸೇವಕರ ಸನ್ಮಾನವನ್ನು ಫೆ.23ರ ಬೆಳಗ್ಗೆ 10.30 ಪುರಭವನದಲ್ಲಿ ನಡೆಯಲಿದೆ.

ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು, ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಹೆಚ್.ಎಲ್.ಯಮುನಾ ಜ್ಯೋತಿ ಬೆಳಗುವರು. ಅಂಬೇಡ್ಕರ್ ವಾದಿ ಹೆಚ್.ಮೋಹನ್ ಕುಮಾರ್ ಅವರಿಂದ ಉದ್ಘಾಟನಾ ಭಾಷಣ. ಉಪಮೇಯರ್ ಷಫೀ ಅಹ್ಮದ್, ಹಿರಿಯ ಪತ್ರಕರ್ತ ಕೆ.ದೀಪಕ್, ಮಾಜಿ ಮೇಯರ್ ಪುರುಷೋತ್ತಮ್, ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪನಾಯಕ, ನಗರಪಾಲಿಕೆ ಸದಸ್ಯ ಶ್ರೀಧರ್, ಎಸ್.ಡಿ.ಪಿ. ಐನ ಅಬ್ದುಲ್ ಮಜೀದ್ ಇನ್ನಿತರರು ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: