ಪ್ರಮುಖ ಸುದ್ದಿ

ಗ್ರಾ.ಪಂ ನೌಕರರ ಬೃಹತ್ ಪ್ರತಿಭಟನೆ : ಬೇಡಿಕೆಗಳ ಈಡೇರಿಕೆಗೆ ಆಗ್ರಹ

ರಾಜ್ಯ(ಮಡಿಕೇರಿ )ಫೆ.22 :  – 1993 ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 112 ನಿಯಮದಂತೆ ವೇತನ ಶ್ರೇಣಿ ‘ಡಿ’ ದರ್ಜೆ ರೂ. 17,000 ದಿಂದ ರೂ. 28,950 ಮತ್ತು “ಸಿ” ದರ್ಜೆ ರೂ. 21,400 ದಿಂದ 36,950 ನಿಗದಿಪಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳಾದ ಸೇವಾ ನಿಯಮಾವಳಿ ರಚಿಸಬೇಕು, ವೃದ್ದಾಪ್ಯ ವೇತನ, ವೈದ್ಯಕೀಯ ವೆಚ್ಚ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಗ್ರಾ.ಪಂ ನೌಕರರಿಗೂ ನೀಡಬೇಕು, ಉಳಿದಿರುವ 18 ಸಾವಿರ ನೌಕರರ ಮಾಹಿತಿ ಅಳವಡಿಸಿ ಎಲ್ಲರಿಗೂ ವೇತನ ಬಿಡುಗಡೆ ಮಾಡಬೇಕು, 1252 ಗ್ರಾ.ಪಂ ಗಳನ್ನು ಮೇಲ್ದರ್ಜೆಗೇರಿಸುವ ಕಡತಗಳು ವಿವಿಧ ಹಂತದಲ್ಲಿ ಅನುಮೊದನೆ ಆಗದೆ ಉಳಿದಿದ್ದು, ತಕ್ಷಣ ಅನುಮೋದನೆ ನೀಡಬೇಕು, ಗಣಕ ಯಂತ್ರ ನಿರ್ವಾಹಕರಿಗೂ ಗ್ರೇಡ್ 2 ಕಾರ್ಯದರ್ಶಿ ಬಡ್ತಿ ನೀಡಬೇಕು, 26,000 ಹುದ್ದೆಗಳನ್ನು ಸೃಷ್ಟಿ ಮಾಡಿ ಎಲ್ಲರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಕೊಡಗು ಜಿಲ್ಲೆಯಿಂದಲೂ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ತೆರಳಿದ್ದ ವಿವಿಧ ಗ್ರಾ.ಪಂ ಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: